ಬಳ್ಳಾರಿ,ಜೂ.15-ಕೋವಿಡ್-19 ವೇಳೆ ಲಾಕ್ ಡೌನ್ ವಿಧಿಸಿದಾಗ ಜನರು ಸಾಕಷ್ಟು ತಾಪತ್ರಯ ಪಡುತ್ತಿರುವುದನ್ನು ಗಮನಿಸಿ ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ನಗರದ ಎಲ್ಲಾ 39 ವಾರ್ಡುಗಳ ಸುಮಾರು 60 ಸಾವಿರ ಕುಟುಂಬಗಳಿಗೆ 3 ಲಕ್ಷ 60 ಸಾವಿರ ಕೆಜಿ ತರಕಾರಿ ಹಂಚುವ ಮೂಲಕ ಮಾದರಿ ರಾಜಕಾರಣಿ ಎನಿಸಿದ್ದಾರೆ. ಅವರಿಗೆ ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆಗಳು ಸಲ್ಲುತ್ತವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು ಆಗಿರುವ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ. ಇಲ್ಲಿನ ಶಾದಿ ಮಹಲ್ ನಲ್ಲಿ ಹಮ್ಮಿಕೊಂಡಿದ್ದ ಆಕ್ಷಿಜನ್ ಹಾಗೂ ಸ್ಯಾನಿಟೈಸರಿಂಗ್ ಬ್ಯಾಂಕ್ ಗೆ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆಯ ಮೇರೆಗೆ ನಾಸಿರ್ ಹುಸೇನ್ ನೇತೃತ್ವದಲ್ಲಿ ಪಕ್ಷವು ಜನರ ಸಂಕಷ್ಟಗಳಿಗೆ ಮಿಡಿದಿದೆ. ಕೊವಿಡ್ ಸೋಂಕಿತ ರೋಗಿಗಳಿಗೆ ಬೆಡ್, ಆಕ್ಷಿಜನ್, ವೆಂಟಿಲೇಟರ್, ಐಸಿಯು, ಮಡಿಸಿನ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ಪಕ್ಷವು ಜಿಲ್ಲಾಡಳಿತ, ಇಲ್ಲಿನ ಜನಪ್ರತಿನಿಧಿಗಳು, ವೈದ್ಯರು, ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿಗಳ ಜೊತೆ ನಿರಂತರ ಸಮನ್ವಯತೆ ಸಾಧಿಸಿ ಜನರ ನೋವಿಗೆ ಧ್ವನಿಯಾಗಿದೆ. 10 ರಿಂದ 20 ಕೆಎಲ್ ಆಕ್ಷಿಜನ್ ಸಾಮಥ್ರ‍್ಯ ಸಂಗ್ರಹವೂ ಮಾಡಿ, ನಗರದೆಲ್ಲೆಡೆ ಸ್ಯಾನಿಟೈಸರಿಂಗ್ ಕೆಲಸ ಮುಂದುವರಿಯಲಿದೆ. ಪ್ರತಿಯೊಂದು ವಾರ್ಡುಗಳಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಲಾಗಿದ್ದು, ಜನರು ಕೊರೊನಾ ಓಡಿಸಲು ವ್ಯಾಕ್ಸಿನ್ ಪಡೆಯಬೇಕು. ವ್ಯಾಕ್ಸಿನ್ ಕೊರತೆಯಾಗದಂತೆ ಕಾಂಗ್ರೆಸ್ ಪಕ್ಷ ಸತತ ಪ್ರಯತ್ನ ನಡೆಸಿದೆ. 3ನೇ ಅಲೆಗೆ ಮಕ್ಕಳೂ ಬಲಿಯಾಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರದ ಸಹಯೋಗದಲ್ಲಿ ಮಕ್ಕಳ ಚೈತನ್ಯ ಕೇಂದ್ರ ಆರಂಭಿಸಿದ್ದು ಜಿಲ್ಲೆ ಕೊರೊನಾ ಎದುರಿಸುವ ಎಲ್ಲ ಸಾಮಥ್ರ‍್ಯ ಹೊಂದಿದೆ ಎಂದರು.ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಮಾತನಾಡಿ, ಝೂಮ್ ಆಪ್ ಮೂಲಕ ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಅವರು ಬಡವರಿಗೆ ನೆರವಾಗಬೇಕೆಂದು ಕರೆ ನೀಡಿದ್ದರು.
ಎಐಸಿಸಿ, ಕೆಪಿಸಿಸಿ ಹಾಗೂ ಜಿಲ್ಲೆಯ ಹಿರಿಯ ನಾಯಕರ ಸೂಚನೆ ಮೇರೆಗೆ ಕಳೆದ 16 ದಿನಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ. ಇನ್ನೆರಡು ದಿನ ಅವಶ್ಯಕ ಸಾಮಗ್ರಿಗಳನ್ನು ಜನರಿಗೆ ನೀಡುತ್ತೇವೆ. ಜಿಲ್ಲಾ ಖನಿಜ ನಿಧಿಯಿಂದ ಕೊರೊನಾ ತಡೆಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಹಣ ಬಳಕೆ ಮಾಡುವಂತೆ ಕಾಂಗ್ರೆಸ್ ಮನವಿ ಮಾಡಿತ್ತು. ಇದರಿಂದಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವಲ್ಲಿ ಅಹರ್ನಿಶಿ ಶ್ರಮಿಸುತ್ತಿದೆ. ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದ ಬಳ್ಳಾರಿಯಲ್ಲೀಗ ಜನರು ಸೋಂಕಿನಿAದ ಗುಣಮುಖರಾಗಿದ್ದಾರೆ. ಕಪ್ಪು ಶಿಲೀಂದ್ರ ರೋಗಕ್ಕೂ ಕೂಡ ಕೇಂದ್ರ ಸರ್ಕಾರದೊಂದಿಗೆ ಮಾತಾಡಿ ತೈವಾನ್ ನಿಂದ ಅಗತ್ಯ ಔಷಧಿಗಳನ್ನು, ಇಂಜೆಕ್ಷನ್ ಗಳನ್ನು ಜಿಲ್ಲೆಗೆ ಒದಗಿಸಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಮಾತನಾಡಿ, ಸರ್ಕಾರಗಳು ಮಾಡದ ಕೆಲಸವನ್ನು ಕಾಂಗ್ರೆಸ್ ಪಕ್ಷವು ಮಾಡುತ್ತಿದೆ. ಪಕ್ಷದ ಧುರೀಣರು, ನಾಯಕರು, ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು, ಕಾರ್ಯಕರ್ತರುಗಳು ಕೊರೊನಾ ವಾರಿಯರ್ಸ್ಗಳಂತೆ ದುಡಿಯುತ್ತಿದ್ದಾರೆ ಎಂದರು.ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸದಸ್ಯರೂ ಆಗಿರುವ ಕಾಂಗ್ರೆಸ್ ಮುಖಂಡ ಮುಂಡ್ರಿಗಿ ನಾಗರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಕೊವಿಡ್ ನಿವಾರಣೆಯಲ್ಲಿ ಪಕ್ಷದ ಸೇವೆಯೂ ಕಡೆಗಣಿಸುವಂತಿಲ್ಲ. ಸಂಸದ ಡಾ.ಸೈಯದ್ ನಾಸಿರ್ ಹುಸೇನ್, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೇರಿದಂತೆ ಎಲ್ಲ ನಾಯಕರು ಸೋಂಕಿತರ ನೋವಿಗೆ ಸ್ಪಂದಿಸಿದ್ದಾರೆ.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಗತ್ಯತೆಗಳನ್ನು ಈಡೇರಿಸಿದ್ದಾರೆ ಎಂದರು.ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹುಮಾಯೂನ್ ಖಾನ್, ಜೆಎಸ್ ಆಂಜನೇಯಲು ಮಾತನಾಡಿ, ಆಕ್ಷಿಜನ್, ಸ್ಯಾನಿಟೈಸರಿಂಗ್ ಟ್ಯಾಂಕ್, ತರಕಾರಿ ದಿನಸಿಯನ್ನು ಸಮರ್ಪಕವಾಗಿ ತಲುಪಿಸಲು ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಕೂಡ ಸಾಕಷ್ಟು ಶ್ರಮಿಸಿದೆ ಎಂದರು.ಕಾAಗ್ರೆಸ್ ಪಕ್ಷದ ಧುರೀಣರಾದ ಎಲ್.ಮಾರೆಣ್ಣ, ಕಲ್ಲುಕಂಭ ಪಂಪಾಪತಿ, ಮಾಜಿ ಶಾಸಕ ನಿರಂಜನ್ ನಾಯ್ಡು, ಮುಖಂಡರಾದ ಎನ್‌ಎಂಡಿ ಭಾಷಾ ಅವರ ಪುತ್ರ, 30 ನೇ ಸದಸ್ಯ ಆಸೀಫ್, 18 ನೇ ವಾರ್ಡ್ ಸದಸ್ಯ ನಂದೀಶ್,ಹೊನ್ನೂರಪ್ಪ, ನಾಗರಾಜಗೌಡ, ಅಯಾಜ್ ಅಹ್ಮದ್, ವೆಂಕಟೇಶ್ ಹೆಗಡೆ, ಪೃಥ್ವಿರಾಜ್, ಹನುಮಕಿಶೋರ್, ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ನಾಗರಾಜ ಸೇರಿದಂತೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.
ವರದಿ : ಬಿ.ಪಂಪನಗೌಡ.ಬಳ್ಳಾರಿ.9886633682




0 Comments