Ticker

6/recent/ticker-posts

Ad Code

Responsive Advertisement

7 ದಿನಗಳಲ್ಲಿ 127 ಕಿ.ಮೀ.ಮನೆಯಲ್ಲೇ ವಾಕ್ ಮಾಡಿದ ಹಿರಿಯ ವಕೀಲ ಶಂಕರಪ್ಪ

         ಕೋವಿಡ್ ಸಂದರ್ಭದಲ್ಲಿ ಮನೆಯಲ್ಲೇ ವಾಕ್ ಮಾಡಲು ಸಾಧ್ಯವೆಂದು ನಿರೂಪಿಸಿದ ಹಿರಿಯ ವಕೀಲ   ಶಂಕರಪ್ಪ

         ಮನೆಯಲ್ಲೇ ದಿನಕ್ಕೆ 20 ಕಿ.ಮೀವಾಕ್ ಮಾಡಿ ಅಚ್ಚರಿ ಮೂಡಿಸಿದ ಹಿರಿಯ ವಕೀಲ ಶಂಕರಪ್ಪ


 

ಬೆಂಗಳೂರುಕೊರೊನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವಕೀಲ ವಿಶಂಕರಪ್ಪ ಅವರ ಮನೆಯಲ್ಲಿಯೇ ವಾಕ್ ಮಾಡುವ ಮೂಲಕ ಊಹೆಗೂ ನಿಲುಕದ ದಾಖಲೆ ನಿರ್ಮಿಸಿದ್ದಾರೆ. 7 ದಿನಗಳಲ್ಲಿ 14 ಘಿ 15 ಅಡಿ ಹಾಲ್ನಲ್ಲಿ ಬರೋಬ್ಬರಿ 127 ಕಿ.ಮೀದೂರ ವಾಕ್ ಮಾಡಿದ್ದಾರೆ!

 

ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಹೊರಗೆ ಬರುವಂತಿಲ್ಲಮನೆಯಲ್ಲಿ ವ್ಯಾಯಾಮ ಮಾಡದೇ ಪರೋಕ್ಷವಾಗಿ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುವ ರೀತಿ ದೇಹವನ್ನು ಬೆಳೆಸಿಕೊಳ್ಳುತ್ತಿದ್ದಾರೆಮನಸಿದ್ದರೆ ಮಾರ್ಗ ಎಂಬುದಕ್ಕೆ ಹಿರಿಯ ವಕೀಲ ವಿಶಂಕರಪ್ಪ ಅವರು ಮನೆಯ ಹಾಲ್ ನಲ್ಲೇ ದಿನಕ್ಕೆ 20 ಕಿ.ಮೀವಾಕ್ಮಾಡಿ ಅಚ್ಚರಿ ಮೂಡಿಸಿದ್ದಾರೆ.

 

 ರೀತಿಯ ಸಾಹಸ ಮಾಡಿರುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹುಡುಕಿದರೆಯಾರೂ ಮಾಡಿಲ್ಲಇದೊಂದು ದಾಖಲೆ ಅಂತಲೇ ಹೇಳಲಾಗುತ್ತಿದೆಕೊರೊನಾ ಸೋಂಕಿಗೆ ಒಳಗಾದ ಶಂಕರಪ್ಪ ಅವರಿಗೆ ನಡಿಗೆಯ ಅಗತ್ಯತೆ ಯಾಕೆ ಬಿತ್ತುಅದರಿಂದ ಆದ ಅನುಕೂಲಗಳ ಬಗ್ಗೆ ವಿವರಿಸಿದ್ದಾರೆ.

 

ಶಂಕರಪ್ಪ ಅವರ ದಿನದ ನಡಿಗೆ

ಶಂಕರಪ್ಪ ಅವರು ಸದ್ಯ ಸಿದ್ದಾಪುರದಲ್ಲಿ ನೆಲೆಸಿದ್ದು ಅವರ ಮನೆಯ ಹಾಲ್  ವಿಸ್ತೀರ್ಣ ಕೇವಲ 14 ಘಿ 15 ಅಡಿಕೊರೊನಾ ಲಾಕ್ ಡೌನ್ ಹಾಗೂ ಸೋಂಕಿನ ಭಯದಿಂದ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ ಬಗ್ಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಧೀಶರಾದ ವಿಗೋಪಾಲಗೌಡವಕೀಲರಾದ ಬಾಬು ಅವರು ಮನೆಯಲ್ಲೇ ಕಾವ್ ಮಾಡುವಂತೆ ಸಲಹೆ ನೀಡಿದರು.

 

ಹೀಗಾಗಿ ನಾನು ಮನೆಯಲ್ಲಿಯೇ ವಾಕ್ ಮಾಡಲು ಆರಂಭಿಸಿದ್ದಾರೆಬೆಳಗ್ಗೆ ಒಂದೂವರೆ ತಾಸುಮಧ್ಯಾಹ್ನ ಒಂದು ಗಂಟೆಸಂಜೆ ಒಂದೂವರೆ ಗಂಟೆ ಕಾಲ ಮನೆಯಲ್ಲಿ ವಾಕ್ ಮಾಡುತ್ತಾರೆನಾನು ದಿನಕ್ಕೆ ಎಷ್ಟು ನಡೆಯುತ್ತೇನೆ ಎಂಬ ಅರಿವು ನನಗೆ ಇರಲಿಲ್ಲನನ್ನ ಮಕ್ಕಳು ಕೊಟ್ಟ ಸಲಹೆಯಿಂದ ನಾನು ಆಪ್ ಮೂಲಕ ನನ್ನ ದಿನದ ವಾಕ್ ವಿವರ ಆಪ್ ನಲ್ಲಿ ದಾಖಲಿಸಲು ನೋಂದಣಿ ಮಾಡಿದೆ.

 

ಕಳೆದ ಏಳು ದಿನದಲ್ಲಿ ಮನೆಯೊಳಗೆ 127 ಕಿ.ಮೀವಾಕ್ ಮಾಡಿದ್ದೇನೆಬರೋಬ್ಬರಿ 1,92,436 ಹೆಜ್ಜೆ, 448 Heart pts, 17,166 ಕ್ಯಾಲೋರೀಸ್ ಬರ್ನ್ ಮಾಡಲಾಗಿದ್ದು, 1,903 ನಿಮಿಷದಲ್ಲಿ 127.11 ಕಿಮೀದೂರ ಕ್ರಮಿಸಿದ್ದೇನೆ ಎಂದು ವಕೀಲ ಶಂಕರಪ್ಪ ತಿಳಿಸಿದ್ದಾರೆ.

ಕೊರೊನಾ ಸೋಂಕಿನ ಮೊದಲ ಅಲೆಗೆ ಕೊರೊನಾ ಸೋಂಕಿಗೆ ಒಳಗಾದೆಕೊರೊನಾದಿಂದ ಜೀವ ಉಳಿಸಿಕೊಂಡಿದ್ದು ನನಗೊಂದು ಪುನರ್ಜನ್ಮಮಣಿಪಾಲ್ ಆಸ್ಪತ್ರೆಯ ವೈದ್ಯರಿಗೆ  ವಿಚಾರದಲ್ಲಿ ನಾನು ಕೃತಜ್ಞಇನ್ನು ಕೊರೊನಾ ಎರಡನೇ ಅಲೆಗೆ ನನ್ನ ಆಪ್ತ ಬಳಗವನ್ನು ಕಳೆದುಕೊಂಡಿದ್ದೇನೆನನ್ನು ಆರೋಗ್ಯ ಸುಧಾರಣೆಗೆ ವೈದ್ಯರೊಬ್ಬರು ದಿನ ನಿತ್ಯ ನಡೆಯಬೇಕು ಎಂದು ಸಲಹೆ ಮಾಡಿದ್ದರುಹೀಗಾಗಿ ಅಂದಿನಿA ದಿನ ಬಿಡದಂತೆ ವಾಕ್ ಮಾಡುತ್ತಿದ್ದೇನೆಹೀಗಾಗಿ ಪುಟ್ಟ ಹಾಲ್ ನಲ್ಲಿಯೇ ದಿನಕ್ಕೆ 20 ಕಿ.ಮೀವಾಕ್ ಮಾಡುತ್ತಿದ್ದೇನೆ.

 

ಕೊರೊನಾ ಸೋಂಕಿನಿA ಚೇತರಿಸಿಕೊಂಡ ಬಂದವರಗೆ ನಾನು ಕೊಡುವ ಪುಟ್ಟ ಸಲಹೆ ಇಷ್ಟೇತಪ್ಪದೇ ವಾಕ್ ಮಾಡಿಎಷ್ಟು ನಡೆಯುತ್ತೀರೋ ಅಷ್ಟು ಆರೋಗ್ಯಕ್ಕೆ ಒಳ್ಳೆಯದುಬೇರೆ ಕಾಯಿಲೆಗಳಿಂದ ದೂರ ಉಳಿಯಲು ನಡಿಗೆ ಅಗತ್ಯಲಾಕ್ ಡೌನ್ ಇದೆಜಾಗ ಇಲ್ಲ ಅಂತ ಮನೆಯಲ್ಲಿ ಕೂತರೆ ಕಾಯಿಲೆಗಳನ್ನು ಮೈಮೇಲೆ ಆಹ್ವಾನಿಸಿಕೊಂಡAತೆ ಎಂದು ಕಿವಿಮಾತು ಹೇಳಿದ್ದಾರೆ.


Post a Comment

0 Comments

Ad Code

Responsive Advertisement