Ticker

6/recent/ticker-posts

Ad Code

Responsive Advertisement

ದೇಶದಲ್ಲಿ ರೂಪಾಂತರಿ ತಳಿ ‘ಡೆಲ್ಟಾ ಪ್ಲಸ್’ 22 ಪ್ರಕರಣಗಳು ಪತ್ತೆ

 ಕೊರೊನಾ ಎರಡನೇ ಅಲೆಯಿಂದ ದೇಶವು ಚೇತರಿಸಿಕೊಳ್ಳುವುದಕ್ಕೂ ಮುನ್ನ, ಅದರ ಇನ್ನೊಂದು ರೂಪಾಂತರಿತ ತಳಿ ‘ಡೆಲ್ಟಾ ಪ್ಲಸ್‌’ ಹಲವೆಡೆ ಕಾಣಿಸಿಕೊಂಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ಸೋಂಕಿನ 22 ಪ್ರಕರಣಗಳು ಪತ್ತೆಯಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

22 ಪ್ರಕರಣಗಳ ಪೈಕಿ ಮಹಾರಾಷ್ಟ್ರದ ರತ್ನಗಿರಿ ಹಾಗೂ ಜಲಗಾಂವ್‌ ಜಿಲ್ಲೆಯಲ್ಲಿ 16 ಪ್ರಕರಣಗಳು ವರದಿಯಾಗಿವೆ. ಕೇರಳದ ಪಾಲಕ್ಕಾಡ್‌ ಮತ್ತು ಪತ್ತನಂತಿಟ್ಟ ಜಿಲ್ಲೆಗಳು ಹಾಗೂ ಮಧ್ಯಪ್ರದೇಶದ ಭೋಪಾಲ್‌ ಮತ್ತು ಶಿವಪುರಿ ಜಿಲ್ಲೆಗಳಲ್ಲಿ ಉಳಿದ ಪ್ರಕರಣಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡೆಲ್ಟಾ ಪ್ಲಸ್‌ ತಳಿ ಕಾಣಿಸಿಕೊಂಡಿರುವ ರಾಜ್ಯಗಳಿಗೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಕೋವಿಡ್‌ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿತರ ಸಂಖ್ಯೆಯು ಏರಿಕೆಯಾಗದಂತೆ ನೋಡಿಕೊಳ್ಳಬೇಕು, ಸೋಂಕಿತರ ಮಾದರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಅಧಿಕೃತ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ.

ಡೆಲ್ಟಾ ಪ್ಲಸ್‌ ತಳಿಯು ಹೆಚ್ಚಿನ ಪ್ರಸರಣದ ಸಾಮರ್ಥ್ಯವನ್ನು ಹೊಂದಿದೆ. ಇನ್ನಷ್ಟು ಗಟ್ಟಿಯಾಗಿ ಶ್ವಾಸಕೋಶಕ್ಕೆ ಅಂಟಿಕೊಳ್ಳುವ ಶಕ್ತಿ ಹೊಂದಿದೆ ಹಾಗೂ ಪ್ರತಿಕಾಯ ಚಿಕಿತ್ಸೆಗೆ ಸ್ಪಂದಿಸದಷ್ಟು ಶಕ್ತಿಯುತವಾಗಿದೆ. ಆದರೆ, ಸದ್ಯಕ್ಕೆ ಅದರ  ಹರಡುವಿಕೆಯ ಪ್ರಮಾಣ ಕಡಿಮೆ ಇದೆಎಂದು ಕೊರೊನಾ ವೈರಾಣುಗಳ ಮ್ಯಾಪಿಂಗ್‌ ಮಾಡುವ ಭಾರತೀಯ ವಿಜ್ಞಾನಿಗಳು ಸಚಿವಾಲಯಕ್ಕೆ ತಿಳಿಸಿದ್ದಾರೆ.

‘ಕೆ417ಎನ್‌’ ಎಂದು ಗುರುತಿಸಲಾಗುವ ಈ ತಳಿಯು ಭಾರತವಲ್ಲದೆ ಅಮೆರಿಕ, ಬ್ರಿಟನ್‌, ಪೋರ್ಚುಗಲ್‌, ಸ್ವಿಡ್ಜರ್ಲೆಂಡ್‌, ಜಪಾನ್‌, ಪೋಲಂಡ್‌, ನೇಪಾಳ, ಚೀನಾ ಹಾಗೂ ರಷ್ಯಾದಲ್ಲೂ ಕಾಣಿಸಿದೆ. ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳು ಈ ತಳಿಯ ವಿರುದ್ಧವೂ ಪರಿಣಾಮಕಾರಿ ಎನಿಸಬಲ್ಲವು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

Post a Comment

0 Comments

Ad Code

Responsive Advertisement