ವಿವೇಕ ಚೇತನ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ವತಿಯಿಂದ ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ 140 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು ನೀಡಲಾಯಿತು.
ಈ ವೇಳೆ ವಿವೇಕ ಚೇತನ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ರವಿದಾಸ್ ಬಿಂಡಿಗನವಿಲೆ ಮಾತನಾಡಿ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಪದಾಧಿಕಾರಿಗಳು, ಸ್ನೇಹಿತರು, ಸಹೋದ್ಯೋಗಿಗಳೆಲ್ಲ ಸೇರಿ ಈ ದಿನ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕೊರೋನಾ ಮಹಾಮಾರಿಯಿಂದ ಒಂದೂವರೆ ವರ್ಷದಿಂದ ಕೋವಿಡ್ ಭಯದಲ್ಲೇ ಜನ ಬದುಕುವ ಸ್ಥಿತಿ ಬಂದೊದಗಿದೆ ಕೊರೋನಾ ಹೆಚ್ಚಾಗಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸುವ ಪರಿಣಾಮ ಜನತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ ತುಂಬಾ ಕಷ್ಟಕ್ಕೆ ಒಳಗಾಗುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಬಲಿಷ್ಠರು ಮುಂದಕ್ಕೆ ಬಂದು ದುರ್ಬಲರಿಗೆ ಸಹಾಯ ಮಾಡಬೇಕು. ಅಂತಹ ಕೆಲಸವನ್ನು ಲಯನ್ ಕೆ. ಕೃಷ್ಣಮೂರ್ತಿ, ಪ್ರಶಾಂತ್ ರಾಯ್ ಬಾಗಿ ಹಾಗೂ ಇತರ ಯುವಕರು ಕೈಜೋಡಿಸಿ ಕಿಟ್ ನೀಡುವುದು ಔಷಧಿ ವಿತರಿಸುವುದು ಸೇರಿದಂತೆ ಹಲವು ಒಳ್ಳೆಯ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯ ಅದರಲ್ಲೂ ಈ ಯುವಕರು ವಿವೇಕಾನಂದರ ಆದರ್ಶವಾದಿಗಳು ಎಂದು ಹೇಳಬಹುದು ಮುಂದಿನ ದಿನಗಳಲ್ಲಿ ಇವರು ವಿವೇಕಾನಂದರ ಆದರ್ಶಗಳನ್ನು ಇಟ್ಟುಕೊಂಡು ಬೆಳೆಯಬೇಕಾಗುತ್ತದೆ ಕಾರಣ "ನಿಮ್ಮ ಬಾಳಿನ ಶಿಲ್ಪಿ ನೀವಾಗಿ" ಅಂದರೆ ವಯಸ್ಸಾದವರ, ನಿರ್ಗತಿಕರ, ಬಡವರ, ಶ್ರೇಯೋಭಿಲಾಷಿಗಳಗಿ ಎಂದು ಅರ್ಥಪೂರ್ಣವಾಗಿ ಸ್ವಾಮಿ ವಿವೇಕಾನಂದರವರು ಹೇಳಿದ್ದಾರೆ. ಅವರು ಹೇಳಿದಂತೆ ಎಲ್ಲರೂ ತಮ್ಮ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಂಡರೆ ನಮ್ಮ ದೇಶ ಉತ್ತುಂಗಕ್ಕೇರುವುದರಲ್ಲಿ ಸಂಶಯವೇ ಇಲ್ಲ. ಲಯನ್ ಕೆ. ಕೃಷ್ಣಮೂರ್ತಿ ರವರು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ಯ ಕಾರ್ಯದರ್ಶಿ ಗಳಾಗಿ ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಮುಂದಿನ ತಿಂಗಳು ಅವರು ಅಧ್ಯಕ್ಷರಾಗಲಿದ್ದಾರೆ ಅವರು ಇನ್ನೂ ಹೆಚ್ಚಿನ ಒಳ್ಳೆ ಕಾರ್ಯಗಳನ್ನು ಮಾಡಲು ದೇವರು ಅವರಿಗೆ ಶಕ್ತಿ ತುಂಬಲಿ ಎಂದು.
ನಂತರ ಲಯನ್ಸ್ ಕ್ಲಬ್ ಮೆಗಾಸಿಟಿ ಕಾರ್ಯದರ್ಶಿ ಲಯನ್ ಕೆ ಕೃಷ್ಣಮೂರ್ತಿ ಮಾತನಾಡಿ ಕರೋನಾ ಎರಡನೇ ಅಲೆ ಭೀಕರತೆ ಪಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮ ಜಾರಿ ಗಳಿಸಿದ ಸಂದರ್ಭದಲ್ಲಿ ಜನತೆ ಬದುಕು ಕಟ್ಟಿಕೊಳ್ಳಲು ಪರದಾಡುವ ಪರಿಸ್ಥಿತಿ ಒಂದೆಡೆಯಾದರೆ ಪ್ರಾಣಿಗಳು ಆಹಾರ ಸಿಗದೆ ಹಸಿವಿನಿಂದ ಬಳಲುವ ಪರಿಸ್ಥಿತಿ ಬಂದಿದೆ ಆದ ಕಾರಣ ಲಾಕ್ ಡೌನ್ ದಿನದಿಂದಲೂ ಇಲ್ಲಿಯವರೆಗೂ ಮಾರುತಿ ಮೆಡಿಕಲ್ಸ್ ಮಾಲೀಕ ರಾದ ಮಹೇಂದ್ರ ಮುನೋತ್ ಸಹಕಾರದೊಂದಿಗೆ ಹಾಗೂ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ವತಿಯಿಂದ ದಿನನಿತ್ಯ ಸುಮಾರು ನೂರಕ್ಕೂ ಹೆಚ್ಚು ಶ್ವಾನಗಳಿಗೆ ಹಾಗೂ ಗೋವುಗಳಿಗೆ ಆಹಾರ ನೀಡುವ ಕಾರ್ಯವನ್ನು ಸಮಂತ್ ಕೃಷ್ಣಮೂರ್ತಿ ಹಾಗೂ ಶ್ರೇಯಸ್ ಕೃಷ್ಣಮೂರ್ತಿ ಮಾಡುತ್ತಿದ್ದಾರೆ. ಅದೇ ರೀತಿ ಲಾಕ್ ಡೌನ್ ನಿಂದಾಗಿ ಕಷ್ಟಕ್ಕೊಳಗಾಗಿರುವ ಪತ್ರಕರ್ತರಿಗೆ, ಕೊರೋನಾ ವಾರಿಯರ್ಸ್ಗಳಿಗೆ, ಪೌರಕಾರ್ಮಿಕರಿಗೆ, ಮಂಗಳಮುಖಿಯರಿಗೆ ಸೇರಿದಂತೆ ಹಲವು ಬಡ ಕುಟುಂಬಗಳಿಗೆ ಸುಮಾರು 1500ಕ್ಕೂ ಹೆಚ್ಚು ಅಡುಗೆ ಮಾಡಲು ಅವಶ್ಯಕ ವಾಗಿರುವ ದಿನಸಿ ಸಾಮಗ್ರಿ ಕಿಟ್ ಗಳನ್ನು ವಿತರಿಸಿದ್ದೇವೆ ಜೊತೆಗೆ ದಿನನಿತ್ಯ 500ಕ್ಕೂ ಹೆಚ್ಚು ಜನರಿಗೆ ಮಧ್ಯಾಹ್ನದ ಗುಣಮಟ್ಟದ ಊಟ ನೀಡುತ್ತಿದ್ದೇವೆ ಈ ಒಳ್ಳೆಯ ಕಾರ್ಯಕ್ಕೆ ನಮ್ಮ ಜತೆ ಕೈ ಜೋಡಿಸಿ ಸಹಕರಿಸಿದ ಮಹೇಂದ್ರ ಮುನೋತ್, ಉಪೇಂದ್ರ, ರವಿದಾಸ್, ಮುಕುಂದ, ಡಾ. ವಿ. ಸಂದೀಪ್, ಡಾ. ದಿನೇಶ್ ಎಂ.ಜಿ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಅಶೋಕ್ ಕುಲಕರ್ಣಿ, ವೇಣುಗೋಪಾಲ್ ಶೆಟ್ಟಿ, ದಿನೇಶ್ ನಾಯಕ್, ವಿ. ಕೃಷ್ಣಮೂರ್ತಿ, ಎಸ್. ಸುಧಾಕರ್ ಶೆಟ್ಟಿ, ಲಯನ್ಸ್ ಕ್ಲಬ್ ಸಮೃದ್ದಿ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಸಮಂತ್ ಕೃಷ್ಣಮೂರ್ತಿ, ಶ್ರೇಯಸ್ ಕೃಷ್ಣಮೂರ್ತಿ, ಭಾರತಿ, ಮಹೇಶ್ ಕೆ. ವಿ, ನಾಗೇಶ ಮಯ್ಯ, ಸಂದೀಪ್ .ಕೆ, ಉಮೇಶ್ ಶಾಸ್ತ್ರಿ, ನಾರಾಯಣ ಭಂಡಾರಿ, ಹೇಮಲತಾ ಶೆಟ್ಟಿ, ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ನ ಮುಖ್ಯಸ್ಥರಾದ ಪ್ರಶಾಂತ್ ರಾಯ್ ಬಾಗಿ ಸೇರಿದಂತೆ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317ಎ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸಮೃದ್ಧಿ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ ನಾದ ವೈರ್ ವೆಲ್ಫೇರ್ ಸೆಂಟರ್ ನ ಮುಖ್ಯಸ್ಥರಾದ ಪ್ರಕಾಶ್ ರಾಯ್ ಭಾಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
click here to READ this news :


0 Comments