Ticker

6/recent/ticker-posts

Ad Code

Responsive Advertisement

ತಿ.ನರಸೀಪುರ: ಅಪರಿಚಿತ ವ್ಯಕ್ತಿಯ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆ....!

 ತಿ.ನರಸೀಪುರ. ಮೇ.24:-ತಾಲ್ಲೂಕಿನ ಸೋಸಲೆ ಗ್ರಾಮದ ಪ್ರಯಾಣಿಕರ ಬಸ್ ತಂಗು ದಾಣದ ಬಳಿ  ಸುಮಾರು 30-35 ವರ್ಷದ ಗಂಡಸಿನ ಅಪರಿಚಿತ ವ್ಯಕ್ತಿಯ ಶವ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತಯಾಗಿದ್ದು ಬನ್ನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿತ ಮೃತನು ಕೋಲು ಮುಖ, ಎಣ್ಣೆಗೆಂಪಿನ ಮೈಬಣ್ಣ, ತೆಳ್ಳಗಿನ ಮೈಕಟ್ಟು, ಕಪ್ಪು ಕೂದಲಿನ ಚಹರೆ ಹೊಂದಿದ್ದಾನೆ ಮೃತನ ಮೈ ಮೇಲೆ ಗಾಡ ಹಸಿರು ಕಪ್ಪು ಗೀರು ಗಳುಳ್ಳ ತುಂಬು ತೋಳಿನ ಷರ್ಟ್,ನೀಲಿ ಜೀನ್ಸ್ ಪ್ಯಾಂಟ್,ಬ್ರೌನ್ ಕಲರ್ ಸ್ಟ್ಯಾಂಡ್ ಬನಿಯನ್,ಕಾಫಿ ಕಲರ್ ನಿಕ್ಕರ್ ಇದ್ದು, ಈ ವ್ಯಕ್ತಿಯ ಎತ್ತರ 5.5 ಆಗಿದೆ ಹಾಗೂ ಬಲ ಕೈ ಮೇಲೆ ರಂಗ ಎಂದು ಹಚ್ಚೆ ಸಹ ಇದ್ದು ಒಂದು ಜೊತೆ ಕಪ್ಪು ಕಲರ್ ಪಾದರಕ್ಷೆ  ಸ್ಥಳದಲ್ಲಿ ದೊರಕಿದೆ.ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಅಥವಾ ಯಾರಿಗಾದರೂ ಈ ವ್ಯಕ್ತಿಯ ಸುಳಿಯು ಸಿಕ್ಕಲ್ಲಿ , ಮೈಸೂರು ಜಿಲ್ಲಾ ಕಂಟ್ರೋಲ್‌ ರೊಂ 0821-2444800, ತಿ.ನರಸೀಪುರ ವೃತ್ತ ನಿರೀಕ್ಷಕರ ಮೊ.ನಂ 9480805033, ಬನ್ನೂರು ಪೋಲೀಸ್ ಠಾಣೆ ಪೋನ್ ನಂ 08227-275632,

ಬನ್ನೂರು ಪಿ ಎಸ್ ಐ ಮೊ. ನಂ. 9480805053 ಸಂಪರ್ಕಿಸಲು ಕೋರಲಾಗಿದೆ

ಸ್ಥಳಕ್ಕೆ ಜಿಲ್ಲಾ ಅಡಿಷನಲ್ ಎಸ್ ಪಿ. ಶಿವಕುಮಾರ್, ನಂಜನಗೂಡು ಡಿವೈಎಸ್ ಪಿ ಗೋವಿಂದರಾಜು ಹಾಗೂ ತಿ.ನರಸೀಪುರ ಸಿಪಿಐ ಕೃಷ್ಣಪ್ಪ ಸ್ಥಳಕ್ಕೆ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Post a Comment

0 Comments

Ad Code

Responsive Advertisement