ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೊಂದು ಆಕ್ಸಿಜನ್ ದುರ್ಘಟನೆ ಸಂಭವಿಸಿದೆ. ಆಕ್ಸೀಜನ್ ಕೊರತೆಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ. ಅಫಜಲಪುರ ತಾಲೂಕಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ. ಅಫಜಲಪುರ ತಾಲೂಕ ಆಸ್ಪತ್ರೆಯಲ್ಲಿ ಒಟ್ಟು 32 ಸೋಂಕುತರನ್ನು ತೀವ್ರ ನಿಗಾದಲ್ಲಿಟ್ಟು, ಆಕ್ಸಿಜನ್ ನೀಡಲಾಗುತ್ತಿತ್ತು. ಆದರೆ, ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿನ ಆಕ್ಸಿಜನ್ ಖಾಲಿಯಾಗಿದೆ ಎನ್ನಲಾಗಿದೆ. ಪರಿಣಾಮ ನಿನ್ನೆ ರಾತ್ರಿಯಿಂದ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಅಸುನೀಗಿದ್ದಾರೆ.
ಆಕ್ಸಿಜನ್ ಮೇಲೆ ಅವಲಂಬಿತರಾದವರಿಗೂ 7 ಗಂಟೆಯಿಂದ ಆಕ್ಸಿಜನ್ ಸರಬರಾಜಿನಲ್ಲಿ ಏರುಪೇರಾಗಿದೆ. ಕ್ಷಣ ಕ್ಷಣಕ್ಕೆ ಕೋವಿಡ್ ಸೋಂಕಿತರ ಸ್ಥಿತಿ ಗಂಭೀರವಾಗಲಾರಂಭಿಸಿದೆ. ಡಿಸ್ಚಾರ್ಜ್ ಮಾಡಿಕೊಂಡು ಬೇರೆ ಕಡೆ ಹೋಗೋಣ ಅಂದ್ರೆ ಬೇರೆ ಕಡೆಯೂ ಆಕ್ಸಿಜನ್ ಬೆಡ್ ಖಾಲಿ ಇಲ್ಲದಿರೋಡು ರೋಗಿಗಳ ಸಂಬಂಧಿಕರನ್ನು ಕಂಗಾಲಾಗುವಂತೆ ಮಾಡಿದೆ.
ಮೊನ್ನೆಯಷ್ಟೇ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಘಟನೆ ಆಗಿತ್ತು. ಇದೀಗ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ಮರುಕಳಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಎಲ್ಲಿಯೂ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಮೂರು - ನಾಲ್ಕು ತಾಸು ಮಾತ್ರ ಆಕ್ಸೀಜನ್ ಲಭ್ಯತೆ ಇದೆ. ಉಳಿದ ಸಮಯದಲ್ಲಿ ಸಮರ್ಪಕವಾಗಿ ಆಕ್ಸೀಜನ್ ಪೂರೈಸುತ್ತಿಲ್ಲ. ಆಕ್ಸೀಜನ್ ಕೊರತೆ ಇದ್ದರೂ ತರಿಸಿಕೊಂಡು ಸರಿಪಡಿಸೋ ಕೆಲಸ ನಡೆದಿಲ್ಲ. ಇದರ ಪರಿಣಾಮ ಕೋವಿಡ್ ಸೋಂಕಿತರು ಆಕ್ಸೀಜನ್ ಕೊರತೆಯಿಂದ ಸಾವನ್ನಪ್ಪಿದ್ದು, ಈಗಲಾದ್ರೂ ಎಚ್ಚೆತ್ತುಕೊಂಡು, ಸಮರ್ಪಕ ಆಕ್ಸೀಜನ್ ವ್ಯವಸ್ಥೆ ಮಾಡಬೇಕು. ರೋಗಿಗಳ ಜೊತೆ ಚೆಲ್ಲವಾಟ ಆಡೋದನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
0 Comments