ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ಮಾರಪ್ಪನಪಾಳ್ಯ ದ ಅಶೋಕ ಪುರದಲ್ಲಿ ಇಂದು ಆಹಾರ ಪದಾರ್ಥಗಳ ದಿನಸಿ ಫುಡ್ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು ಮಹಾಮಾರಿ ಕೋರೋನ ಎರಡನೇ ಅಲೆ ಪ್ರಾರಂಭವಾಗಿದ್ದು ಎಲ್ಲರೂ ನಿಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಬಡಾವಣೆಯ ಜನರಿಗೆ ಕರೆತಂದು ಲಸಿಕೆ ಹಾಕಿಸಿ ಹಾಗೂ ಸರ್ಕಾರದ ಮಾರ್ಗ ಸೂಚನೆ ಗಳಾದ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಹಾಕಿ ಕೈಗಳನ್ನು ಆಗಾಗ ಹೊಳೆಯುತ್ತಿರಬೇಕು, ಸುಖಾ ಸುಮ್ಮನೆ ಹೊರಗಡೆ ಬರಬೇಡಿ. ಮನೆಯಲ್ಲಿ ಇರಬೇಕು ಎಂದು ಹೇಳಿದ ಅವರು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಜ್ಯದಲ್ಲಿ ನಮ್ಮ ನಾಯಕರು ಹಾಗೂ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಎಲ್ಲರಿಗೂ ಉಚಿತ ಪಡಿತರ ಅಕ್ಕಿ ರಾಗಿ ಗೋಧಿ ನೀಡುತ್ತಿದ್ದು, ಇದರ ಜೊತೆಗೆ ನಾವು ಇಂದು ಕೆಲವು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದು, ಸರ್ಕಾರ ಈಗಾಗಲೇ ಮಹಾಮಾರಿ ಕರೋಣ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಕೋರೋಣ ಸೋಂಕು ತಡೆಗೆ ಸಹಕರಿಸಿಬೇಕು ಎಂದು ಸಚಿವ ಕೆ ಗೋಪಾಲಯ್ಯ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನರೇಂದ್ರ ಬಾಬು, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಎಂ ಮಹದೇವ್, ಮುಖಂಡರಾದ ಜಯಸಿಂಹ, ಡಾ, ನಾಗೇಂದ್ರ, ಸಾಯಿ ರೆಡ್ಡಿ, ಪುಟ್ಟಸ್ವಾಮಿ ಬಿಬಿಎಂಪಿ ಹಿರಿಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments