Ticker

6/recent/ticker-posts

Ad Code

Responsive Advertisement

*ಶ್ರಮಿಕ ಸಿದ್ಧಾಂತಕ್ಕೆ ಸಾವಿಲ್ಲ: ರವೀಂದ್ರ ಭಟ್ಟ ಅಭಿಮತ* - ಕಾರ್ಮಿಕ ಕರ್ನಾಟಕ ಯೂಟ್ಯೂಬ್ ಗೆ ಚಾಲನೆ

'ಪ್ರಸಕ್ತ ಸನ್ನಿವೇಶದಲ್ಲಿ ಎಡಶಕ್ತಿಗಳಿಗೆ ಹಿನ್ನಡೆ ಆಗಿದೆ ಎಂದು ಕಂಡುಬಂದರೂ ಅದು ಮಂಕು ಕವಿದ ವಾತಾವರಣವೇ ಹೊರತು ಅದು ಸಿದ್ದಾಂತದ ಸಾವಲ್ಲ ಜನರನ್ನೇ ಕೇಂದ್ರೀಕರಿಸಿಕೊಂಡಿರುವ ಜನಪರ ಸಿದ್ಧಾಂತಕ್ಕೆ ಎಂದೂ ಸಾವಿಲ್ಲ ಎಂದು ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅಭಿಪ್ರಾಯ ಪಟ್ಟರು. 

ಭಾನುವಾರ ವರ್ಚುವಲ್ ಮಾದರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಕಾರ್ಮಿಕ ಕರ್ನಾಟಕ' ಯೂಟ್ಯೂಬ್ ಚಾನಲ್ ಉದ್ಘಾಟಿಸಿ ಮಾತನಾಡಿದರು.

ಕರೋನಾ ಎನ್ನುವ ಸಾಂಕ್ರಾಮಿಕ ರೋಗವನ್ನೇ ಬಂಡವಾಳ ಮಾಡಿಕೊಂಡ ನಮ್ಮ ಆಳುವ ಸರ್ಕಾರಗಳು ಜನರ ಬದುಕನ್ನು ರಕ್ಷಿಸುವ ಬದಲು ಹಲವು ರೀತಿಯ ಕಾನೂನು ತಿದ್ದುಪಡಿಗಳ ಮೂಲಕ ಅವರ ಬದುಕಿನ ಮೇಲೆಯೇ ದಾಳಿ ನಡೆಸುತ್ತಿವೆ
ಬದಲಾದ ಪರಿಸ್ಥಿತಿಯಲ್ಲಿ 'ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದು ಅನಿವಾರ್ಯ ಆಗಿದೆ. ಯೂಟ್ಯೂಬ್ ವಾಹಿನಿಯನ್ನು ಕಾರ್ಮಿಕರ ಜ್ಞಾನವೃದ್ಧಿಗೆ ಬಳಸುವ ಉದ್ದೇಶವೇ ಅಭಿನಂದನಾರ್ಹ ಕಾರ್ಯ' ಅದರ ಜೊತೆ ಆಳುವ ಸರ್ಕಾರದ ಜನವಿರೋಧಿ ನೀತಿಗಳನ್ನು ಬಯಲುಗೊಳಿಸುವ ಕೆಲಸವನ್ನು ಇದು ಮಾಡಲಿದೆ ಎನ್ನುವ ಆಶಯ ನಾನು ಹೊಂದಿರುವೆ ಎಂದರು.

'ಕೊರೊನಾ ಸಂಕಷ್ಟ ಕಾಲದಲ್ಲಿ ಜನ ಪ್ರಾಣ, ಉದ್ಯೋಗ, ಆಸ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅತ್ತ ದೇಶದ ಬಿಲಿಯಾಧಿಪತಿಗಳು ಮಾತ್ರ ಸೂಪರ್ ಲಾಭ ಗಳಿಕೆ ಮಾಡಿಕೊಳ್ಳುತ್ತಿದ್ದಾರೆ, ಇಂತಹ ವಿರೋಧಾಭಾಸವನ್ನು ಪ್ರಶ್ನಿಸಬೇಕಾದ ಮಾಧ್ಯಮ, ಕಾರ್ಪೊರೇಟ್ ಬಂಡವಾಳದಾರರ ಪರ ವಕಾಲತ್ತು ವಹಿಸುತ್ತಿದೆ' ಎಂದು  ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ವಿಷಾದ ವ್ಯಕ್ತಪಡಿಸಿದರು. 

'ಕಾರ್ಪೊರೇಟೀಕರಣ ವಿರುದ್ಧ ಕಾರ್ಮಿಕ ವರ್ಗ ಒಗ್ಗಟ್ಟಿನ ಪ್ರತಿರೋಧ ತೋರಬೇಕಿದೆ, ಈ ದಿಸೆಯಲ್ಲಿ ಕಾರ್ಮಿಕ ಕರ್ನಾಟಕ ಯೂಟ್ಯೂಬ್ ವಾಹಿನಿ ಕಾರ್ಮಿಕ ವರ್ಗವನ್ನು ಜಾಗೃತಗೊಳಿಸಲು ಶ್ರಮಿಸಲಿ' ಎಂದರು. 

ಸಿಐಟಿಯು ರಾಜ್ಯಾಧ್ಯಕೆ ಎಸ್.ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಕೆ.ಎನ್.ಉಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಕೆ.ಮಹಾಂತೇಶ ಪ್ರಸ್ತಾವಿಕವಾಗಿ ಮಾತನಾಡಿದರೆ ಸೈಯದ್ ಮುಜೀಬ್ ನಿರ್ವಹಣೆ, ಮಾಲಿನಿ ಮೇಸ್ತಾ ಸ್ವಾಗತ ಮತ್ತು ಮಹೇಶ ಪತ್ತಾರ್ ವಂದನಾರ್ಪಣೆ ಮಾಡಿದರು.

Post a Comment

0 Comments

Ad Code

Responsive Advertisement