Ticker

6/recent/ticker-posts

Ad Code

Responsive Advertisement

ಮಹಿಳಾ ಕ್ರಿಕೆಟಿಗರಿಗೆ ಬಹುಮಾನದ ಮೊತ್ತ ವಿತರಣೆ!

 ಮುಂಬೈ : ಭಾರತ ಮಹಿಳಾ ತಂಡ ಕಳೆದ ವರ್ಷದ ಟಿ20 ವಿಶ್ವಕಪ್​ ರನ್ನರ್ ಅಪ್ ಬಹುಮಾನ ಮೊತ್ತವನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಬಿಸಿಸಿಐ, ಮಾಧ್ಯಮಗಳ ವರದಿಗೆ ಎಚ್ಚೆತ್ತುಕೊಂಡಿದೆ. ಈ ವಾರವೇ ವಿಶ್ವಕಪ್ ತಂಡದ ಸದಸ್ಯರಿಗೆ ಸಿಗಬೇಕಿರುವ ಹಣವನ್ನು ತಲುಪಿಸುವುದಾಗಿ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಕಳೆವ ವರ್ಷ ಹರ್ಮನ್ ಪ್ರೀತ್​ಕೌರ್ ನೇತೃತ್ವದ ಭಾರತದ ವನಿತೆಯರ ತಂಡ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ರನ್ನರ್ ಅಪ್ ಆಗಿತ್ತು.


ಐಸಿಸಿ ಚಾಂಪಿಯನ್ ತಂಡಕ್ಕೆ 10 ಲಕ್ಷ ಯುಎಸ್ ಡಾಲರ್ ಮತ್ತು ರನ್ನರ್ ಅಪ್​ಗೆ 5 ಲಕ್ಷ ಯುಎಸ್ ಡಾಲರ್ ಬಹುಮಾನದ ಮೊತ್ತ ನೀಡಿತ್ತು. ಆದರೆ, ವಿಶ್ವಕಪ್ ಮುಗಿದು 14 ತಿಂಗಳಾದರೂ ಬಿಸಿಸಿಐ ಮಹಿಳಾ ತಂಡಕ್ಕೆ ನೀಡಬೇಕಾದ ಬಹುಮಾನ ಮೊತ್ತವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಭಾನುವಾರ ಇಂಗ್ಲೆಂಡ್​ನ ಟೆಲಿಗ್ರಾಫ್ ಪತ್ರಿಕೆ ಈ ಕುರಿತು ವರದಿ ಪ್ರಕಟಿಸಿ, ಬಿಸಿಸಿಐಗೆ ಕಾರಣ ಕೇಳಿತ್ತು. ಈ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಂತಿದೆ ಬಿಸಿಸಿಐ.

ಈ ವಾರವೇ ಬಹುಮಾನದ ಮೊತ್ತವನ್ನು ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ತಂಡಕ್ಕೆ ನೀಡುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಈ ವಾರದ ಅಂತ್ಯದ ವೇಳೆಗೆ ತಮ್ಮ ಬಹುಮಾನದ ಮೊತ್ತವನ್ನು ಪಡೆಯಲಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೊಳಿಸಲಾಗಿದ್ದು, ಅವರು ಶೀಘ್ರದಲ್ಲೇ ತಮ್ಮ ಪಾಲನ್ನು ಪಡೆಯುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ " ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .


Post a Comment

0 Comments

Ad Code

Responsive Advertisement