ಬೆಂಗಳೂರು ನಗರ ಜಿಲ್ಲೆ, ಮೇ.29 ( ಕರ್ನಾಟಕ ವಾರ್ತೆ) : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗವನ್ನು ನಿಯಂತ್ರಿಸುವ ಸಲುವಾಗಿ ಆರೋಗ್ಯ ವಲಯದಲ್ಲಿ ಹೆಚ್ಚಿನ ಪರಿಣಿತ ಸಹಾಯಕ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ ಇರುವುದರಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಸುಮಾರು 21 ದಿನಗಳ ಕ್ಲಾಸ್‌ರೂಂ / ಆನ್‌ಲೈನ್ ತರಬೇತಿ ಹಾಗೂ 3 ತಿಂಗಳ ಆನ್‌ಜಾಬ್ ತರಬೇತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ / ಸಮುದಾಯ ಆರೋಗ್ಯ ಕೇಂದ್ರ / ಆಸ್ಪತ್ರೆಗಳಲ್ಲಿ ಉಚಿತ ತರಬೇತಿಯನ್ನು ಅಲ್ಪಾವಧಿ ಕೋರ್ಸ್‌ಗಳಲ್ಲಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ .
ಎಸ್.ಎಸ್.ಎಲ್.ಸಿ. ಓದಿದವರಿಗೆ ಜನರಲ್ ಡ್ಯೂಟಿ ಅಸಿಸ್ಟೆಂಟ್ , ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸ್ಡ್ ( ಕ್ರಿಟಿಕಲ್ ಕೇರ್ )ಹೋಂ ಹೆಲ್ತ್ ಏಡ್ , ಮೆಡಿಕಲ್ ಎಕ್ವಿಪ್ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ , ಹೋಂ ಹೆಲ್ತ್ ಏಡ್ , ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್ - ಬೇಸಿಕ್. ಲೆಬೊಟಾಮಿಸ್ಟ್ , ಕೋರ್ಸ್‌ಗಳಲ್ಲಿ ತರಬೇತಿ ನೀಡಲಿದ್ದಾರೆ.
ಈ ಕೋರ್ಸ್‌ಗಳಲ್ಲಿ ತರಬೇತಿ ಪಡೆಯಲು ಇಚ್ಚಿಸುವ 18 ರಿಂದ 40 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳು ತಮ್ಮ ಸ್ವ - ವಿವರಗಳನ್ನು ದಿನಾಂಕ : 04.06.2021 ರೊಳಗೆ https://grgopage.link/vJh99 ಗೂಗಲ್ ಫಾರ್ಮ್‌ನಲ್ಲಿ ತುಂಬ ಕಳುಹಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ , ಬೆಂಗಳೂರು ನಗರ ಮೊ.ಸಂ : 9731124693 , 9945817237 ಇ - ಮೇಲ್ Dvor : dsdoblr.urban@gmail.com ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು , ಕೌಶಲ್ಯ ಮಿಷನ್ , ಬೆಂಗಳೂರು ನಗರ ಜಿಲ್ಲೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

0 Comments