Ticker

6/recent/ticker-posts

Ad Code

Responsive Advertisement

ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಸಂಬಂಧ ಸಭೆ

18 ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಸಂಬಂಧ ಸಭೆ ನಡೆಸಿರುವ ಬಗ್ಗೆ:

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 18 ರಿಂದ 44 ವರ್ಷದ ಮುಂಚೂಣಿ ಕಾರ್ಯರ್ತರಿಗೆ ಲಸಿಕೆ ನೀಡುವ ಸಲುವಾಗಿ ಇಂದು ಮುಖ್ಯ ಆಯುಕ್ತರು ಶ್ರೀ ಗೌರವ್​​ ಗುಪ್ತ ರವರು ವರ್ಚುವಲ್ ಸಭೆ ನಡೆಸಿದರು. ಈ ವೇಳೆ ವಿಶೇಷ ಆಯುಕ್ತರುಗಳಾದ ಶ್ರೀ ರಾಜೇಂದ್ರ ಚೋಳನ್, ಶ್ರೀ ಡಿ.ರಂದೀಪ್, ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ವಲಯ ಆರೋಗ್ಯಾಧಿಕಾರಿಗಳು, ವ್ಯಾಕ್ಸಿನೇಷನ್ ನೋಡಲ್ ಆದಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.


ನಗರದಲ್ಲಿ 18 ರಿಂದ 44 ವರ್ಷದ ಮುಂಚೂಣಿ ಕಾರ್ಯರ್ತರೆಂದು ಗುರುತಿಸಿರುವ 22 ವರ್ಗಗಳಿಗೆ ಪ್ರತ್ಯೇಕ ಶಿಬಿರಗಳನ್ನು ಮಾಡಿ ತ್ವರಿತವಾಗಿ ಲಸಿಕೆ ನೀಡಲು ಸೂಕ್ತ ಕ್ರಮವಹಸಿಬೇಕೆಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಆಯುಕ್ತರು, ರಾಜ್ಯ ಸರ್ಕಾರ ಗುರುತಿಸಿರುವ 22 ವರ್ಗಗಳಿಗೆ ನಿಗದಿತ ಸ್ಥಳ ಗುರುತಿಸಿ ಶಿಬಿರಗಳನ್ನು ಮಾಡಿ ಲಸಿಕೆ ನೀಡಲು ಕ್ರಮವಹಿಸಬೇಕು. ಯಾರಿಗೂ ಸಮಸ್ಯೆ ಆಗದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಆ ಸ್ಥಳದ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿ ಲಸಿಕೆ ನೀಡಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, ಮುಂಚೂಣಿ ಕಾರ್ಯಕರ್ತರಿಗೆ ಆಯೋಜಿಸುತ್ತಿರುವ ಶಿಬಿರಗಳಲ್ಲಿ 18 ರಿಂದ 44 ವಷದವರಿಗೆ ನೀಡಲಾಗುತ್ತಿದೆ. ಈ ಶಿಬಿರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತಿಲ್ಲ. ಆದ್ದರಿಂದ ಸರಿಯಾದ ಅನುಕ್ರಮದಲ್ಲಿ ಲಸಿಕೆ ನೀಡಬೇಕು. ಯಾವುದೇ ತೊಡಕು ಉಂಟಾಗಬಾರದು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Post a Comment

0 Comments

Ad Code

Responsive Advertisement