ಸೂರ್ಯನು ಮೇರು, ಧ್ರುವಗಳನ್ನು ಪರೀಕ್ಷಣೀಕರಿಸುತ್ತ ಸಂಚರಿಸುವನು ಎಂದು ಹೇಳಿದಿರಲ್ಲ ವಿಸ್ತಾರವಾಗಿ ತಿಳಿಸಿಕೊಡಿ ಎಂದು ಪರೀಕ್ಷಿತರಾಜ ಪ್ರಾರ್ಥಿಸುತ್ತಾನೆ. ಆಗ ಶುಕಾಚಾರ್ಯರು ಹೇಳುತ್ತಾರೆ. ಕುಂಬಾರನ ತಿಗರಿಯ ಮೇಲಿದ್ದ ಇರುವೆ ತಿಗರಿಯ ಗತಿಯನ್ನಲ್ಲದೇ ತನ್ನ ಗತಿಯನ್ನು ಬಿಡದಂತೆ ತಿರಗುತ್ತವೆ. ಅದರಂತೆ ಸೂರ್ಯನು ಇಡೀ ಲೋಕಕ್ಕೆ ಆತ್ಮನು. ಅವನಿಂದಲೇ ವಸಂತಾದಿ ಆರು ಋತುಗಳಾಗುತ್ತವೆ. ಅವನು ರಾಶಿ ಸಂಜ್ಜಕ ಹನ್ನೆರಡು ಮಾಸಗಳಲ್ಲಿ ಹನ್ನೆರಡು ರೂಪಗಳಲ್ಲಿ ಭೋಗಿಸುತ್ತಿರುವನು. ಈ ಮಾಸವು ಚಾಂದ್ರಮಾನದಿಂದ ಎರಡು ಪಕ್ಷಗಳಲ್ಲಿ ಪಿತೃಮಾನದಿಂದ ಹಗಲು- ರಾತ್ರಿಗಳು ಮತ್ತು ಸೌರಮಾನದಿಂದ ರಾಶಿಗಳೆಂದು ಹೇಳಲ್ಪಡುತ್ತವೆ. ಸೂರ್ಯ ನು ಸಂವತ್ಸರದ ಸ್ವಲ್ಪ ಭಾಗ ಎಂದರೆ ಎರಡು ರಾಶಿಗಳನ್ನು ಭೋಗಿಸುವ ಕಾಲಕ್ಕೆ ಋತು ಎನ್ನುವರು. ಸೂರ್ಯನ ಪ್ರದಕ್ಷಿಣದ ಅರ್ಧಭಾಗಕ್ಕೆ ಅಯನ ಎನ್ನುವರು. ಸಂಪೂರ್ಣ ಹನ್ನೆರಡು ರಾಶಿ ಕ್ರಮಣಕ್ಕೆ ಸಂವತ್ಸರ ಎನ್ನುವರು. ಈ ರೀತಿ ಸಂವತ್ಸರ ಆರಂಭವಾಗುತ್ತದೆ ಎಂದು ಶುಕರು ವಿವರಿಸಿದರು.
ಸೂರ್ಯ ಮಂಡಲದಾಚೆ ಒಂದು ಲಕ್ಷ ಯೋಜನ ಭೂಮಿಯಿಂದ ಎರಡು ಲಕ್ಷ ಯೋಜನದ ಆಚೆ ಚಂದ್ರ ಮಂಡಲವಿದೆ. ಚಂದ್ರನು ನಕ್ಷತ್ರ ರಾಜನೆನಿಸುವನು. ಇವನು ಶೀಘ್ರ ಗಮನವಾಗಿರುವನು. ಇವನು ಸೂರ್ಯನ ಒಂದು ವರ್ಷದ ಗತಿಯನ್ನು ಒಂದು ತಿಂಗಳಲ್ಲಿ ಮತ್ತು ಒಂದು ಮಾಸದ ಗತಿಯನ್ನು ಎರಡೂ ಕಾಲು ದಿನದಲ್ಲಿ ಮತ್ತು ಪಕ್ಷದ ಗತಿಯನ್ನು ಮೂವತ್ತೂ ಮೂಹರ್ತದಲ್ಲಿ ಒಂದು ನಕ್ಷತ್ರವನ್ನು ಭೋಗಿಸುವನು. ಅಭಿಜಿತ ಸಹಿತ ಇಪ್ಪತ್ತೆಂಟು ನಕ್ಷತ್ರಗಳು ಚಂದ್ರನಿಂದ ಮೂರು ಲಕ್ಷ ಯೋಜನ ಮತ್ತು ಭೂಮಿಯಿಂದ ಐದು ಲಕ್ಷ ಯೋಜನ ದೂರವಿದೆ. ಅದು ಮೇರುವಿನ ದಕ್ಷಿಣ ಭಾಗದಿಂದ ಸುತ್ತುತ್ತದೆ. ಅಲ್ಲಿಂದ ಎರಡು ಲಕ್ಷ ಯೋಜನ ಮತ್ತು ಪೃಥ್ವಿಯಿಂದ ಏಳು ಲಕ್ಷ ಯೋಜನ ಮೇಲೆ ಶುಕ್ರನಿರುವನು. ಅವನು ಸಾಮಾನ್ಯವಾಗಿ ಮಾನವರಿಗೆ ಅನುಕೂಲಮಾಡಿಕೊಡುವನು. ಮತ್ತು ಮಳೆಯನ್ನು ತಡೆಯುವ ಗ್ರಹಗಳನ್ನು ಶಾಂತ ಮಾಡುತ್ತಾನೆ. ಸೂರ್ಯನಂತೆ ತಿರಗುತ್ತಿರುವುನು. ಶುಕ್ರನಿಂದ ಎರಡು ಲಕ್ಷ ಯೋಜನ ಮತ್ತು ಭೂಮಿಯಿಂದ ಒಂಭತ್ತು ಲಕ್ಷ ಯೋಜನ ಮೇಲೆ ಬುಧ ನಿರಿವನು. ಅವನೂ ಶುಭಕಾರಿಯು.ಆದರೆ ಸೂರ್ಯನನ್ನು ಡಾಟಿ ಹೋಗುವಾಗ ಅನಾವೃಷ್ಟಿಯನ್ನು ಸೂಚಿಸುವನು. ಅಲ್ಲಿಂದ ಎರಡು ಲಕ್ಷ ಮತ್ತು ಭೂಮಿಯಿಂದ. ಹನ್ನೊಂದು ಲಕ್ಷ ಯೋಜನ ದ ಮೇಲೆ ಅಂಗಾರಕ(ಮಂಗಳ) ನಿರುವನು. ಇವನು ಅಶುಭ ಗ್ರಹವಿದ್ದು, ಅಮಂಗಲವನ್ನು ಸೂಚಿಸುವನು. ಇವನು ವಕ್ರನಾದರೆ ಅನುಕೂಲನು. ಯಾರ ದಶಮ ಸ್ಥಾನದಲ್ಲಿ ಮಂಗಳನಿರುವನೋ ಅವನು ಕುಲದೀಪಕನಾಗುವನು.
ಮಂಗಳನಿಂದ ಎರಡು ಲಕ್ಷ , ಭೂಮಿಯಿಂದ ಹದಿಮೂರು ಲಜ್ಷ ಯೋಜನ ದೂರದಲ್ಲಿ ಗುರು ಇರುವನು. ಗುರು ಒಂದು ರಾಶಿಯಲ್ಲಿ ಒಂದು ವರ್ಷ ಇರಿವನು.
ಗುರುವಿನಿಂದ ಎರಡು ಲಕ್ಷ ಮತ್ತು ಭೂಮಿಯಿಂದ ಹದಿನೈದು ಲಕ್ಷ ಯೋಜನದ ಮೇಲೆ ಶನೃಶ್ವರನಿರುವನು. ಶನಿಯ ಗತಿಯು ಮಂದವಾಗಿರುತ್ತದೆ. ಅವನು ಮೂವತ್ತು ಮಾಸಗಳಲ್ಲಿ ಒಂದು ರಾಶಿಯನ್ನು ದಾಟುವನು. ಅಂದರೆ ಎಲ್ಲ ರಾಶಿಗಳನ್ನು ದಾಟಲು ಮೂವತ್ತು ವರ್ಷ ಗಳು ಬೇಕು. ಶನಿಯನ್ನು ಎಲ್ಲರೂ ಅಶಾಂತಿಕರನೆಂದು ಭಾವಿಸಿದ್ದಾರೆ. ಹಾಗಿಲ್ಲ. ನಾಸ್ತಿಕ, ಧರ್ಮಹೀನ ಮತ್ತು ಪರಲೋಕವನ್ನು ಮನ್ನಿಸದ ನರ ಪಶುಗಳುಗೆ ಶನಿಯೂ ಭಗವತಂತನ ಪ್ರೇರಣೆಯಂತೆ ಕಷ್ಟ ಕೊಡುವನು. ಧರ್ಮ ವಂತರಿಗೆ ಶುಭಕಾರನು. ಒಳ್ಳೆ ಓಜಸ್ವೀ ಶನಿಯನ್ನು ಉಗ್ರ ಗ್ರಹ ಎನ್ನುವರು. ಅವನು ಕ್ಷಣ ಮಾತ್ರದಲ್ಲಿ ರಾಜನನ್ನು ಸೇವಕನನ್ನಾಗಿ, ಸೇವಕನನ್ನು ರಾಜನನ್ನಾಗಿ ಮಾಡುವ ಶಕ್ತಿ ಹೊಂದಿದ್ದಾನೆ.
ಶನಿಯಿಂದಾಚೆ ಹನ್ನೊಂದು ಲಕ್ಷ, ಭೂಮಿಯಿಂದ ಇಪ್ಪತ್ತಾರು ಲಕ್ಷ ಯೋಜನ ದ ಮೇಲೆ ಸಪ್ತ ಋಷಿಗಳಿರುತ್ತಾರೆ. ಅವರು ಲೋಕ ಶ್ರೇಯ ಕಾರಣರಾಗಿ ವಿಷ್ಣುವಿನ ಪರಮ ಪದವೆನಿಸಿದ ಧ್ರುವ ಲೋಕವನ್ನು ಪ್ರದಕ್ಷಿಣೀ ಕರಿಸುವರು. ಸಪ್ತ ಋಷಿಗಳಿಂದಾಚೆ ಹದಿಮೂರು ಲಕ್ಷ ಮತ್ತು ಭೂಮಿಯಿಂದ ಮೂವತ್ರೊಂಭತ್ತು ಯೋಜನದಾಚೆ ಧ್ರುವ ಲೋಕವಿದೆ. ಅಲ್ಲಿ ಒಂದು ಸ್ಥಂಭವಿದೆ. ಅದನ್ನಾಧರವಾಗಿಟ್ಟುಕೊಂಡೇ ಸಂಪೂರ್ಣ ಗ್ರಹ ನಕ್ಷತ್ರ ಮಂಡಲವು ವಾಯುವಿನಿಂದ ಪ್ರೇರಿತವಾಗಿ ತಿರಗುತ್ತದೆ. ಮೇಟೆಗೆ ಕಟ್ಟಿದ ಎತ್ತುಗಳು ಸುತ್ತುವಂತೆ ಪ್ರಕೃತಿ ಪುರುಷರ ಸಂಯೋಗದಿಂದ ಅವು ಅತ್ತಿತ್ತ ಚಲಿಸದಂತೆ ಒಂದೆ ಅಂತರದಲ್ಲಿ ಚಲಿಸುವಂತೆ ಕಟ್ಟಲ್ಪಟ್ಟಿವೆ.
ಕೆಲ ಜ್ಞಾನಿಗಳು ಭಗವಂತ ವಾಸುದೇವ ಶಿಂಶುಮಾರ ರೂಪದಿಂದ ನಿಂತಿದ್ದಾನೆ ಎಂದು ವರ್ಣಿ ಸುವರು ಎಂದು ಶುಕಾಚಾರ್ಯರು ಹೇಳಿದರು.
ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ {9886465925}

0 Comments