Ticker

6/recent/ticker-posts

Ad Code

Responsive Advertisement

ಕರೋನಾಗೆ ಬಲಿಯಾದ ನೌಕರನಿಗೆ 60 ವರ್ಷದ ತನಕ ಸಂಬಳ

 ನವದೆಹಲಿ : ಕರೋನಾ ಮಹಾಮಾರಿ ಸಂದರ್ಭದಲ್ಲಿ ಟಾಟಾ ಸ್ಟೀಲ್ ತನ್ನ ನೌಕರರ ಮತ್ತು ಅವರ ಪರಿವಾರದ ಸುರಕ್ಷೆಗೆ ವಿಶೇಷ ಸ್ಕೀಮ್ ಘೋಷಣೆ ಮಾಡಿದೆ.  ಈ ಘೋಷಣೆ ಬಳಿಕ ಕಂಪನಿ ಚರ್ಚೆಯಲ್ಲಿದೆ. ಟಾಟಾ ಸ್ಟೀಲ್ ಘೋಷಣೆ ಪ್ರಕಾರ ಕರೋನಾ ಮಹಾಮಾರಿಯಿಂದಾಗಿ ಮೃತಪಟ್ಟ ಕಂಪನಿಯ ನೌಕರನ ಪರಿವಾರ ಅಥವಾ ನಾಮಿನಿಗೆ ಮುಂದಿನ 60 ವರ್ಷದ ತನಕ ವೇತನ ಸಿಗಲಿದೆ. 


ಸುತ್ತೋಲೆ ಕಳುಹಿಸಿದ ಟಾಟಾ ಸ್ಟೀಲ್..!

ಟಾಟಾ ಸ್ಟೀಲ್  ಈ ಸಂಬಂಧ ಸುತ್ತೋಲೆಯೊಂದನ್ನು ರವಾನಿಸಿದ್ದು, ತನ್ನ ನೌಕರರ ಸಾಮಾಜಿಕ  ಸುರಕ್ಷೆಗಾಗಿ ನೆರವು ನೀಡಲು ಲಭ್ಯ  ಇರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದೆ. ಕರೋನಾದಿಂದಾಗಿ ಒಂದು ವೇಳೆ ಕಂಪನಿ ನೌಕರ ಮೃತಪಟ್ಟರೆ, ಆತನ ಪರಿವಾರಕ್ಕೆ 60 ವರ್ಷದ ತನಕ ವೇತನ  ಅಷ್ಟೇ ಅಲ್ಲ, ಮೆಡಿಕಲ್ ಬೆನಿಫಿಟ್ಸ್, ಹೌಸಿಂಗ್ ಫೆಸಿಲಿಟಿ ಸಿಗಲಿದೆ.  ಅಷ್ಟೇ ಅಲ್ಲ, ನೌಕರರ ಮಕ್ಕಳ ಗ್ರ್ಯಾಜುವೇಶನ್ ತನಕದ  ವೆಚ್ಚವನ್ನೂ ಕಂಪನಿ ಭರಿಸಲಿದೆ. 


Post a Comment

0 Comments

Ad Code

Responsive Advertisement