Ticker

6/recent/ticker-posts

Ad Code

Responsive Advertisement

ಕೋವಿಡ್ ನಡುವೆಯೂ ಅಗರಬತ್ತಿ ಉದ್ಯಮ 4 ಲಕ್ಷ ಕಾರ್ಮಿಕರಿಗೆ ಜೀವನಾಧಾರ

ಬೆಂಗಳೂರು, ಮೇ 29, 2021: ಅಗರಬತ್ತಿ ಉದ್ಯಮವು ಕಾರ್ಮಿಕ ಆಧಾರಿತವಾದ ಉದ್ಯಮವಾಗಿದ್ದು, ಈ ಉದ್ಯಮವು ಕೋವಿಡ್ ಸಂದರ್ಭದಲ್ಲಿಯೂ ತನ್ನ ಕಾರ್ಮಿಕರಿಗೆ ಜೀವನಾಧಾರವಾಗಿದೆ ಎಂದು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಹೇಳಿದೆ. ಸಂಘದ ಪ್ರಕಾರ, ಉದ್ಯಮ ಎದುರಿಸುತ್ತಿರುವ ಸವಾಲಿನ ನಡುವೆಯೂ ಸುಮಾರು 4 ಲಕ್ಷ ಕಾರ್ಮಿಕರಿಗೆ ಕಳೆದ ಹಣಕಾಸು ವರ್ಷದಲ್ಲಿ ಉದ್ಯೋಗಾವಕಾಶ ಒದಗಿಸಿದೆ. ನಾಲ್ಕು ಲಕ್ಷ ಕಾರ್ಮಿಕರ ಪೈಕಿ ಶೇ 60ರಷ್ಟು ಮಂದಿ ಉತ್ಪಾದನೆಯಲ್ಲಿ ಹಾಗೂ ಉಳಿದವರು ಮಾರುಕಟ್ಟೆ ಸಂಬಂಧಿತ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಾರ್ಯಪಡೆಯಯಲ್ಲಿ ಶೇ 70ರಷ್ಟು ಮಹಿಳೆಯರೇ ಇದ್ದಾರೆ.


ಉದ್ಯಮವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಎಐಎಎಂಎ ಅಧ್ಯಕ್ಷ ಅರ್ಜುನ ರಂಗಾ ಅವರು, ಉದ್ಯಮವನ್ನು ಕೋವಿಡ್ ಬಾಧಿಸಿದ ಹಿಂದೆಯೇ ನಾವು ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗೆ ತೊಡಕಾಗದಂತೆ ಕ್ರಮವಹಿಸಿದೆವು. ಅಲ್ಲದೆ, ಉದ್ಯಮದಲ್ಲಿ ಗುರುತಿಸಿಕೊಂಡವರು ಯೋಗ, ಅಧ್ಯಾತ್ಮದಲ್ಲಿ ತೊಡಗಿಕೊಂಡಿದ್ದು, ಕಷ್ಟಕಾಲದಿಂದ ಹೊರಬರಲು, ಆದಷ್ಟು ಬೇಗ ಚೇತರಿಸಿಕೊಳ್ಳಲು ಸಹಕಾರಿಯಾಯಿತು. ಇದು, ಜನರಿಗೆ ಉದ್ಯೋಗಕ್ಕೂ ಸಹಕಾರಿಯಾಯಿತು. ಹಲವು ಮನೆಗಳಲ್ಲಿ ಅಗರಬತ್ತಿ ಉದ್ಯಮದಲ್ಲಿ ತೊಡಗಿಕೊಂಡಿರುವವರು ಕುಟುಂಬದ ಜೀವನಾಧಾರವೂ  ಆಗಿದ್ದಾರೆ’ ಎಂದು ಹೇಳಿದರು.

ಎರಡನೇ ಅಲೆ ಮತ್ತು ಲಾಕ್‍ಡೌನ್‍ನಿಂದಾಗಿ ಸರಕುಗಳ ಸಾಗಣೆ ಮತ್ತು ಕಚ್ಚಾ ಪದಾರ್ಥಗಳನ್ನು ತರಿಸಿಕೊಳ್ಳುವುದರ ಮೇಲೆ ಪರಿಣಾಮ ಬೀರಿದ್ದರೂ ಉದ್ಯಮದಲ್ಲಿ ಭಾಗಿಯಾದವರಿಗೆ ನೆರವು ನೀಡುವುದು ನಮಗೆ ಸಾಧ್ಯವಾಗಿದೆ ಎಂದು ತಿಳಿಸಿದರು.

ಉದ್ಯೋಗಾವಕಾಶ ಸೃಷ್ಟಿಯ ಜೊತೆಗೆ ಉದ್ಯಮವು ತನ್ನ ಕಾರ್ಮಿಕರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ನೆರವುನೀಡಿದೆ. ಬಹುತೇಕ ಸದಸ್ಯರು ಲಸಿಕೆಯನ್ನು ಪಡೆದುಕೊಂಡಿದ್ದು, ಈ ಮೂಲಕ ತಮ್ಮ ಜೀವ, ಜೀವನ ರಕ್ಷಣೆಗೆ ಒತ್ತುನೀಡಿದ್ದಾರೆ.

ಭಾರತೀಯ ಅಗರಬತ್ತಿ ಉದ್ಯಮದಲ್ಲಿನ ಅಂಉಖ ಪ್ರಮಾಣ ಶೇ 3.6ರಷ್ಟಿದ್ದು, ಹಲವು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿದೆ. ಪ್ರಸ್ತುತ ಉದ್ಯಮದ ಗಾತ್ರವು ರೂ. 7,500 ಕೋಟಿ ಆಗಿದ್ದು, ರಫ್ತು ವಹಿವಾಟಿನಿಂದ ಸುಮಾರು ರೂ. 1,000 ಕೋಟಿ ಆದಾಯವಿದೆ. ಕೋವಿಡ್ -19ನಿಂದ ಲಾಕ್‍ಡೌನ್ ಹಾಗೂ ಸರಕುಸಾಗಣೆ ಮೇಲೆ ಪ್ರತಿಕೂಲ ಪರಿಣಾಮಾಗಿದ್ದೂ ಉದ್ಯಮವು ತನ್ನ ಉತ್ಪನ್ನಗಳ ವಹಿವಾಟು ನಡೆಸುವಲ್ಲಿ ಯಶಸ್ವಿಯಾಗಿದೆ. ಉದ್ಯಮ ಕೋವಿಡ್ ಪೂರ್ವದ ಶೇ 90ರಷ್ಟು ವಹಿವಾಟು ನಡೆಸುವಲ್ಲಿ ಯಶಸ್ವಿಯಾಗಿದೆ.


ಅಖಿಲಭಾರತ ಅಗರಬತ್ತಿ ಉತ್ಪಾದಕರ ಸಂಘ ಕುರಿತು (ಎಐಎಎಂಎ):

1949ರಲ್ಲಿ ಮೈಸೂರು ಊದುÀಬತ್ತಿ ಉತ್ಪಾದಕರ ಸಂಘ (ಎಂಒಎಂಎ) ಎಂಬ ಹೆಸರಿನಲ್ಲಿ ಏಳು ಜನರು ಸಂಘವನ್ನು ಸ್ಥಾಪಿಸಿದರು. ಅಂದಿನಿಂದ ಎಐಎಎಂಎ ಅನಿಯಮಿತವಾಗಿ ಅಗರಬತ್ತಿ ಉತ್ಪಾದನೆಗೆ ಪ್ರೋತ್ಸಾಹಿಸಲು ಶ್ರಮಿಸುತ್ತಿದೆ. 80ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯ ಉತ್ಪಾದಕರು ಉದ್ಯಮದತ್ತ ಆಸಕ್ತಿ ತೋರಿದ್ದು, ಎಂಒಎಂಎ ಅನ್ನು ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘ (ಎಐಎಎಂಎ) ಎಂದು ಮರುನಾಮಕರಣ ಮಾಡಲಾಯಿತು. ಉದ್ಯಮ ಅನಿಯಮಿತವಾಗಿ ಉದ್ಯಮದ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದೇಶದಾದ್ಯಂತ ಒಟ್ಟು 800 ಜನರು ಅಜೀವ ಸದಸ್ಯರಿದ್ದಾರೆ. ಸಂಸ್ಥೆ ಸಹಯೋಗವು ಕೇವಲ ಉದ್ಯಮವನ್ನು ದೇಶಿಯವಾಗಿ ಅಲ್ಲದೆ, ಅಂತರರಾಷ್ಟ್ರೀಯವಾಗಿಯೂ ಉದ್ಯಮವನ್ನು ಬೆಳೆಸಲು ಕಾರಣವಾಗಲಿದೆ.


Post a Comment

0 Comments

Ad Code

Responsive Advertisement