ಕೋರೋನಾ ಸಂಬಂಧ ಸರ್ಕಾರವು ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ನಿಷೇಧ ಹೇರಿದೆ. ಈ ಸಂಬಂಧ ಎಲ್ಲಾ ದೇವಸ್ಥಾನಗಳು ಕೇವಲ ಪೂಜಾ ಕೈಂಕರ್ಯಕ್ಕಾಗಿ ತೆರೆಯಬೇಕು ಎಂದು ಆಜ್ಞಾಪಿಸಿದೆ. ಅಂತೆಯೇ ಶೇಷಾದ್ರಿಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಸರಳ ಸುಂದರವಾಗಿ ಶ್ರೀ ಸುಶಮೀಂದ್ರ ಶ್ರೀಪಾದಂಗಳವರ ಆರಾಧನೆ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ಬುಧವಾರ 28ರಂದು ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಶ್ರೀಪಾದಂಗಳವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು. ಶ್ರೀ ಸುಶಮೀಂದ್ರ ಶ್ರೀ ಪಾದಂಗಳವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಮೂಲ ಮೈಸೂರಿನ ಸುಬ್ಬರಾಯನಕೆರೆ ಮಠದ ಶ್ರೀಗಳವರು ಶ್ರೀ ಗುರುರಾಯರ ಮಠದಲ್ಲಿ ಮಠದ ಪೂರ್ಣಾವಧಿಯ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಶ್ರೀ ಸುಶಮೀಂದ್ರ ತೀರ್ಥ ಶ್ರೀ ಪಾದಂಗಳವರ ಆರಾಧನೆಯ ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕರೋನಾ ಪ್ರಯುಕ್ತ ಸರ್ಕಾರದ ಆದೇಶದ ಮೇರೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು.

0 Comments