Ticker

6/recent/ticker-posts

Ad Code

Responsive Advertisement

ಡಾ. ಅಂಬೇಡ್ಕರ್ ದೇಶ ಸೇವೆ ಅನನ್ಯ : ಡಿ. ಬಸವರಾಜ್


ಸಂವಿಧಾನ ಶಿಲ್ಪಿ ಭಾರತ ರತ್ನ  ಡಾ. ಬಿ.ಆರ್. ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅವರು ಮಾನವೀಯತೆಯ ರಾಯಭಾರಿಯಾಗಿ, ಜಗತ್ತಿನ ಮಹಾನ್ ದಾರ್ಶನಿಕರಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ, ಜಗತ್ತಿನ ಶೋಷಿತರ ಮಹಾನ್ ನಾಯಕರಾಗಿದ್ದು, ಅವರ ದೇಶ ಸೇವೆ ಅನನ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರರು ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಬಣ್ಣಿಸಿದರು. ಅವರಿಂದು ನಗರದ ಹದಡಿ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವಿಭಾಗದವರು ಜಂಟಿಯಾಗಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‍ರವರ 130ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 


ಅಂಬೇಡ್ಕರ್‍ರವರು ಶೋಷಿತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶೋಷಿತರು ಎಂದರೆ ಕೇವಲ ದಲಿತ ವರ್ಗದವರಲ್ಲದೇ ಇಡೀ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಸಮಾನತೆ, ಸಹೋದರತೆಗಾಗಿ, ಮೇಲು-ಕೀಳು ಎಂಬ ಭೇದ-ಭಾವ ಇರಬಾರದೆಂದು ಪ್ರತಿಪಾದನೆ ಮಾಡಿದಂತಹ ಮಹಾನ್ ನಾಯಕರಾಗಿದ್ದರು ಎಂದು ತಿಳಿಸಿದ ಡಿ. ಬಸವರಾಜ್ ಅಂಬೇಡ್ಕರ್‍ರವರು ಶೋಷಿತ ಸಮುದಾಯವನ್ನು ವಿಮೋಚನೆ ಮಾಡುವ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ನೀಡಲು ಸಂಕಲ್ಪ ಮಾಡಿದಂತಹ ಮಹಾನ್ ಮಾನವತಾವಾದಿಯಾಗಿದ್ದರು. ಅವರೊಬ್ಬ ಮಾನವೀಯತೆಯ ರಾಯಬಾರಿಯಾಗಿ ಶ್ರಮಿಸಿದರು ಎಂದು ಸ್ಮರಿಸಿದರು. 

ಅಂಬೇಡ್ಕರ್‍ರವರು ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನು ತಂದು ಕೊಡಲು ಸಂವಿಧಾನದಲ್ಲಿ ಅವಕಾಶ ಕಲ್ಪಸಿದ್ದರಿಂದ ಇಂದು ಜಾತ್ಯಾತೀತ ರಾಷ್ಟ್ರವೆಂದು ಭಾರತ ಗಟ್ಟಿಯಾಗಿ ನೆಲೆಯೂರಿದೆ ಎಂದು ಅವರು ಪ್ರತಿಪಾದಿಸಿದರು.  

ಅಂಬೇಡ್ಕರ್‍ರವರು ಓದಿದಷ್ಟು ಜಗತ್ತಿನ ಯಾರೊಬ್ಬರು ಓದಿಲ್ಲ. ಅವರಷ್ಟು ತಿಳುವಳಿಕೆಯನ್ನು ಪಡೆದಿಲ್ಲ. ಆದುದರಿಂದಲೇ ವಿಶ್ವಸಂಸ್ಥೆ ಅಧ್ಯಯನ ನಡೆಸಿ ಡಾ. ಬಿ.ಅರ್. ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಘೋಷಿಸಿದೆ. ಜಗತ್ತಿನಾದ್ಯಂತ ಅಂಬೇಡ್ಕರ್ ಜಯಂತಿಯ ದಿನವನ್ನು  ವಿಶ್ವ ಜ್ಞಾನದಿನವನ್ನಾಗಿಯೂ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ದಿನದಿಂದಲೂ ಅಂಬೇಡ್ಕರ್‍ವರು ರಚಿಸಿದ ಸಂವಿಧಾನವನ್ನು ಬದಲಿಸಲು ನೂರಾರು ಪ್ರಯತ್ನಗಳನ್ನು ಬಿಜೆಪಿ ಮತ್ತು ಕೋಮುವಾದಿಗಳು ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಒಂದೊಮ್ಮೆ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗಲಿದೆ ಎಂದು ಡಿ. ಬಸವರಾಜ್ ಎಚ್ಚರಿಸಿದರು. 

ರಾಜ್ಯ ಸರ್ಕಾರದ ಸಾರಿಗೆ ನೌಕರರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷವಿದೆಯೆಂದು ಇದೇ ಸಂದರ್ಭದಲ್ಲಿ ಡಿ. ಬಸವರಾಜ್ ಘೋಷಿಸಿದರು. ಮುಖ್ಯಮಂತ್ರಿಗಳು ಮತ್ತು ಸಾರಿಗೆ ಮಂತ್ರಿಗಳು ಸಾರಿಗೆ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು. 

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಹೆಚ್. ಸುಭಾನ್ ಸಾಬ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ರಾಷ್ಟ್ರೀಯ ಮಜ್ಬೂರ್ ವಿಭಾಗದ ಅಧ್ಯಕ್ಷರಾದ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲ್ಲಾವಲಿ ಮುಜಾಹಿದ್, ಅಶ್ರಫ್ ಅಲಿ, ಶಶಿಅಂಗಡಿ, ಜೆ.ವಿ. ವೆಂಕಟೇಶ್, ಗೋಪಿ, ವಾಜಿದ್ ಖಾನ್, ರಫೀಕ್, ಪ್ರವೀಣ್, ರವಿಕುಮಾರ್, ಖಾನ್‍ಸಾಬ್, ಹಜ್ರತ್ ಅಲಿ, ನಾಗರಾಜ್, ಮುಪ್ಪಳ್ಳಿ ಹನುಮಂತ, ನಿಂಗಪ್ಪ, ಕೊಟ್ರೇಶ್, ಹೆಚ್.ವಿ.ರಂಗನಾಥ್, ಪ್ರಕಾಶ್, ಹಸನ್ ಅಲಿ, ಲಿಬಾರ್ಟಿ ಖಾನ್ ಸಾಬ್ ಸೇರಿದಂತೆ ಇತರರು ಹಾಜರಿದ್ದರು. 

Post a Comment

0 Comments

Ad Code

Responsive Advertisement