Ticker

6/recent/ticker-posts

Ad Code

Responsive Advertisement

ಲಸಿಕೆ ಪಡೆದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ

ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಮುಂದಿನ ಭಾನುವಾರ ಈ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಆದರೆ, ಅಭ್ಯರ್ಥಿಗಳು ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಬೇಕಿದ್ದರೆ ಎರಡು ಡೋಸ್​ ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಲೇಬೇಕು ಎಂದು ಚುನಾವಣಾ ಆಯೋಗ ಇಂದು ಸ್ಪಷ್ಟಪಡಿಸಿದೆ. ಅಲ್ಲದೆ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಯಾವುದೇ ಕಾರಣಕ್ಕೂ ವಿಜಯೋತ್ಸವ ಆಚರಿಸಬಾರದು ಎಂದು  ಆದೇಶ ಹೊರಡಿಸಿದೆ.


ಇಂದು ಹೊಸ ಆದೇಶದಲ್ಲಿ ಚುನಾವಣಾ ಆಯೋಗವು "ಮೇ 2 (ಭಾನುವಾರ) ಎಣಿಕೆ ಕೇಂದ್ರಗಳ ಹೊರಗೆ ಯಾವುದೇ ಸಾರ್ವಜನಿಕ ಸಭೆಯನ್ನು ನಡೆಸುವಂತಿಲ್ಲ. 48 ಗಂಟೆಗಳಿಗಿಂತ ಹಳೆಯದಾದ ಕೋವಿಡ್ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷೆಯ ನಂತರವೇ ಅಭ್ಯರ್ಥಿಗಳು ಮತ್ತು ಅವರ ಏಜೆಂಟರನ್ನು ಮತ ಎಣಿಕೆ ಕೇಂದ್ರದ ಒಳಗೆ ಅನುಮತಿಸಲಾಗುತ್ತದೆ.
ಇದರ ಹೊರತಾಗಿ ಅಭ್ಯರ್ಥಿಗಳು ಋಣಾತ್ಮಕ ಆರ್‌ಟಿ-ಪಿಸಿಆರ್ ವರದಿ, ರಾಪಿಡ್ ಆಂಟಿಜೆನ್ ಟೆಸ್ಟ್ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಎಣಿಕೆಯ ಪ್ರಾರಂಭಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಸ್ವೀಕರಿಸಬೇಕು" ಎಂದು ತಿಳಿಸಲಾಗಿದೆ.

ಮೊನ್ನೆ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್  ಹೈಕೋರ್ಟ್​ ಛೀಮಾರಿ ಹಾಕಿತ್ತು. ದೇಶದಲ್ಲಿ ಎರಡನೇ ಕೊರೋನಾ ಅಲೆಗೆ ಚುನಾವಣಾ ಆಯೋಗವೇ ಕಾರಣ. ಹೀಗಾಗಿ ಚುನಾವಣಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನು ಏಕೆ ದಾಖಲಿಸಬಾರದು? ಎಂದು ಪ್ರಶ್ನೆ ಮಾಡಿತ್ತು. ಇದರ ಬೆನ್ನಿಗೆ ಇಂದು ಚುನಾವಣಾ ಆಯೋಗ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಸಾಕಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಆದೇಶಿಸಿದೆ.


ಭಾರತೀಯ ಚುನಾವಣಾ ಆಯೋಗದ ವಿರುದ್ಧ ಛೀಮಾರಿ ಹಾಕಿದ್ದ ಮದ್ರಾಸ್​ ಹೈಕೋರ್ಟ್​, "ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಚುನಾವಣಾ ಆಯೋಗವೇ ಕಾರಣ.

ಸಂದಿಗ್ಧ ಸಂದರ್ಭದಲ್ಲಿ 5 ರಾಜ್ಯಗಳ ಚುನಾವಣೆಯಲ್ಲಿ RALLY ನಡೆಸಲು ಅನುಮತಿ ನೀಡುವ ಮೂಲಕ ಚುನಾವಣಾ ಆಯೋಗ ಸ್ವತಃ ಕೊರೋನಾ ಹರಡಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ವಿರುದ್ಧ ಏಕೆ ಕೊಲೆ ಪ್ರಕರಣ ದಾಖಲಿಸಬಾರದು?" ಎಂದು ಹರಿಹಾಯ್ದಿತ್ತು. ಅಲ್ಲದೆ, ಇತ್ತೀಚೆಗೆ ಮುಗಿದ ತಮಿಳುನಾಡು ವಿಧಾನಸಭಾ ಚುನಾವಣಾ ಮತ ಎಣಿಕೆಗೂ ತಡೆ ಒಡ್ಡುವ ಬೆದರಿಕೆ ಹಾಕಿತ್ತು.​"COVID-19 ರ ಎರಡನೇ ತರಂಗಕ್ಕೆ ಚುನಾವಣಾ ಆಯೋಗ ಏಕೈಕ ಕಾರಣವಾಗಿದೆ. ನಿಮ್ಮ ಅಧಿಕಾರಿಗಳ ಮೇಲೆ ಏಕೆ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಬಾರದು?. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರಚಾರದ ಸಮಯದಲ್ಲಿ ಮುಖವಾಡಗಳು, ಸ್ಯಾನಿಟೈಸರ್​ಗಳ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಕೋವಿಡ್ ಸುರಕ್ಷತಾ ನಿಯಮಗಳನ್ನು ಜಾರಿಗೆ ತರವಲ್ಲಿ ಚುನಾವಣಾ ಸಂಸ್ಥೆ ವಿಫಲವಾಗಿದೆ" ಎಂದು ಹೈಕೋರ್ಟ್ ಕಿಡಿಕಾರಿತ್ತು.

Post a Comment

0 Comments

Ad Code

Responsive Advertisement