ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೊಗ್ರಾಫರ್ಸ್ ಅಸೋಸಿಯೇಷನ್ ನ ಗೌರವ ಸಲಹೆಗಾರರು ಹಾಗೂ ಮೈಸೂರು ವಲಯ ಅಧ್ಯಕ್ಷರಾಗಿ ಆಯ್ಕೆ ಶ್ರೀಯುತ ಬಾಬು ಅವರನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಮೈಸೂರು ವಲಯ ಅಧ್ಯಕ್ಷ ಬಾಬು, ನಿಮ್ಮಗಳ ಹಾರೈಕೆಗೆ ವಂದನೆಗಳು... ನಿಮ್ಮಗಳ ಸಹಕಾರದಿಂದ ಎಲ್ಲವೂ ಸಾಧ್ಯ, ಪದವಿಗಳು ತಾತ್ಕಾಲಿಕ, ಶ್ರೇಯಸ್ಸು ಸಲ್ಲಬೇಕಾದ್ದು ನಿಮಗೆ, ನಾನು ನಿಮಿತ್ತ ಮಾತ್ರ.... ನಿಮ್ಮ ಅಭಿನಂದನೆಗಳಿಗೆ ವಿನಮ್ರ ನಾಗಿ ನಮಿಸುತ್ತೇನೆ ಮತ್ತು ವಿಪ್ರ ಬಾಂಧವರ ಏಳಿಗೆಗೆ ಮನಪೂರ್ವಕವಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದಿದ್ದಾರೆ.
ಸಂಸ್ಥೆಯ ಪರವಾಗಿ ಅಧ್ಯಕ್ಷ ಬಿ.ಕೆ. ರಮೇಶ್ ಮತ್ತು ಪದಾಧಿಕಾರಿಗಳು ಶುಭ ಕೋರಿದ್ದಾರೆ.
ಶ್ರೀಯುತರಿಗೆ ವಾರ್ತಾಜಾಲ ಪತ್ರಿಕಾ ಬಳಗದ ವತಿಯಿಂದ ಅಭಿನಂದನೆಗಳು


0 Comments