ಸಾರಿಗೆ ಮುಷ್ಕರದ ನಡುವೆ ಕಿಡಿಗೇಡಿಗಳ ದಾಳಿ ವೇಳೆ ಸುಮಾರು 60 ಬಸ್‍ಗಳು ಹಾನಿಗೊಂಡಿದೆ. ಏ.7ರಂದು ಆರಂಭಗೊಂಡ ಮುಷ್ಕರದ ನಂತರ ಕೆಎಸ್‍ಆರ್‍ಟಿಸಿಯ 34, ಬಿಎಂಟಿಸಿ 3, ಈಶಾನ್ಯ ಸಾರಿಗೆ ನಿಗಮದ 20 ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ 3 ಬಸ್‍ಗಳು ಹಾನಿಗೊಂಡಿವೆ. ಕೆಲ ಬಸ್‍ಗಳ ಗಾಜುಗಳನ್ನು ಒಡೆಯಲಾಗಿದ್ದರೆ ಮತ್ತಿತರ ಕಡೆ ಹೆಡ್‍ಲೈಟ್‍ಗಳು, ಚಕ್ರಗಳು ಹಾಗೂ ಇತರೆ ವಸ್ತುಗಳನ್ನು ಕೂಡ ಹಾನಿಗೊಳಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ. ಇದರ ನಡುವೆ ನಿಷ್ಠಾವಂತರಾಗಿ ಕೆಲವರು ಕರ್ತವ್ಯಕ್ಕೆ ಹಾಜರಾಗಿದ್ದು, ಅವರನ್ನು ತಡೆಯಲಾಗುತ್ತಿದೆ. ಇಂದು ಸುಮಾರು 3,000ಕ್ಕೂ ಹೆಚ್ಚು ಬಸ್‍ಗಳು ರಾಜ್ಯಾದ್ಯಂತ ಸಂಚರಿಸಿವೆ ಎಂದು ತಿಳಿಸಲಾಗಿದೆ.
ಕಳೆದ 8 ದಿನಗಳ ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 146 ಕೋಟಿ ರೂ. ನಷ್ಟವಾಗಿದೆ!

0 Comments