Ticker

6/recent/ticker-posts

Ad Code

Responsive Advertisement

ಆಸ್ತಿ ತೆರಿಗೆ ಶೇ 5% ರಿಯಾಯಿತಿ ಅವಧಿ ವಿಸ್ತರಣೆ

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2021-22 ನೇ ಸಾಲಿಗೆ ಸಂಬಂಧಪಟ್ಟಂತೆ ಆರ್ಥಿಕ ವರ್ಷದ ಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ: 30-04-2021 ರ ಒಳಗೆ ಪಾವತಿಸಿದ್ದಲ್ಲಿ ಶೇಕಡ 5 ರಷ್ಟು ರಿಯಾಯಿತಿಯನ್ನು ನೀಡಲು ಅವಕಾಶವಿರುತ್ತದೆ. 2021-22 ನೇ ಸಾಲಿನ ಆಸ್ತಿತೆರಿಗೆ ಸಂಗ್ರಹಣೆಯು ಏಪ್ರಿಲ್ 2021ರ ಮಾಹೆಯಿಂದ ಪ್ರಾರಂಭಗೊಂಡಿದ್ದು, ದೇಶದ್ಯಾಂತ ಹಾಗೂ ಬೆಂಗಳೂರು ಮಹಾನಗರದಲ್ಲಿ ಕೋವಿಡ್-19 ಸಮುದಾಯಕ್ಕೆ ವ್ಯಾಪಕವಾಗಿ ಹರಡಿದ್ದು, ಪರಿಸ್ಥಿತಿಯು ಗಂಭೀರವಾದ ಹಿನ್ನಲೆಯಲ್ಲಿ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ದಿನಾಂಕ: 27-04-2021 ರಿಂದ 14 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿರುತ್ತದೆ.

ಸದರಿ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ಸಂಧರ್ಭದಲ್ಲಿಯೂ ಅನಗತ್ಯವಾಗಿ ಹೊರಬಾರದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸರ್ಕಾರದಿಂದ ಕಟ್ಟುನಿಟ್ಟಿನ ಆಜ್ಞೆ ವಿಧಿಸಲಾಗಿರುತ್ತದೆ. ಇಂತಹ ಸಂಧರ್ಭದಲ್ಲಿ ತೆರಿಗೆದಾರರು ಬ್ಯಾಂಕ್‌ಗಳಿಗೆ ಭೇಟಿ ನೀಡಿ ಆಸ್ತಿತೆರಿಗೆ ಪಾವತಿಸುವುದು ಕಷ್ಟಸಾಧ್ಯವಾಗಿರುತ್ತದೆ.

ಆದುದರಿಂದ ತೆರಿಗೆದಾರರ ಅನುಕೂಲಕ್ಕಾಗಿ 2021-22 ನೇ ಸಾಲಿಗೆ ಪೂರ್ಣವಾಗಿ ಆಸ್ತಿತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸಿ ದಿನಾಂಕ: 31-05-2021ರ ಒಳಗಾಗಿ ಪಾವತಿಸುವ ಎಲ್ಲಾ ತೆರಿಗೆದಾರರಿಗೆ ಶೇ .5 ರಷ್ಟು ರಿಯಾಯಿತಿ ನೀಡಲಾಗಿರುತ್ತದೆ.


Post a Comment

0 Comments

Ad Code

Responsive Advertisement