Ticker

6/recent/ticker-posts

Ad Code

Responsive Advertisement

2ನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲ; ಸೋನಿಯಾ ಆಕ್ರೋಶ

ಕೊರೋನಾ 2ನೇ ಅಲೆ ದಿನದಿಂದ ಅಧಿಕವಾಗುತ್ತಲೇ ಇದೆ. ಪ್ರತಿ ದಿನ ದೇಶದಾದ್ಯಂತ 1.5 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆಯಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಗುಜರಾತ್-ಮುಂಬೈ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಕೊರೋನಾದಿಂದ ತತ್ತರಿಸಿದ್ದು, ಸೋಂಕು ತಡೆಗೆ ನೈಟ್ ಕಫ್ರ್ಯೂ ಮೊರೆ ಹೋಗಿವೆ. ಮತ್ತೊಮ್ಮೆ ಲಾಕ್‍ಡೌನ್ ಕೂಗು ಕೇಳಿಬರುತ್ತಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಕೊರೋನಾ ತಡೆಗೂ ಸೂಕ್ತ ಕ್ರಮ ಜರುಗಿಸಿಲ್ಲ. ಪರಿಣಾಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, "ದೇಶದಲ್ಲಿ ಕೊರೋನಾ ಎರಡನೇ ಅಲೆ ವಿಪರಿತವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸುತ್ತಿರುವಲ್ಲಿ ವಿಫಲಾಗಿದೆ. ದೇಶದಲ್ಲಿ ಒಂದು ವರ್ಷದ ತಯಾರಿಯ ಹೊರತಾಗಿಯೂ ನಮ್ಮ ಈಗಿನ ಪರಿಸ್ಥಿತಿಯು ನಿರಾಶಾದಾಯಕವಾಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.


ನವ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯೂಸಿ ಸಭೆಯಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸೋನಿಯಾ ಗಾಂಧಿ, "ದೇಶಕ್ಕೆ ಕೊರೋನಾ ಮಹಾಮಾರಿ ವಕ್ಕರಿಸಿ ಒಂದು ವರ್ಷವಾಗಿದೆ. ಆದರೂ ಕೇಂದ್ರ ಈ ವರೆಗೆ ಅದನ್ನು ಸಮರ್ಥವಾಗಿ ಎದುರಿಸಲು ಸರಿಯಾದ ಸಿದ್ಧತೆಗಳನ್ನು ನಡೆಸಿಲ್ಲ ಎಂದರು.

2ನೇ ಪುಟದಿಂದ   ಕೊರೋನಾ ಸೋಂಕಿತರಿಗೆ ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಬಗ್ಗೆ ಪದೇ ಪದೇ ರಾಜ್ಯಗಳು ಮನವಿ ಸಲ್ಲಿಸುತ್ತಿದ್ದರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರ ಇನ್ನಾದರೂ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ರಾಜ್ಯಗಳಿಗೂ ಸಹಾಯ ಹಸ್ತ ಚಾಚಬೇಕು. ಕೊರೋನಾ ಲಸಿಕೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು. ಲಸಿಕೆ ನೀಡಿಕೆ ಮಾನದಂಡದ ವಯಸ್ಸನ್ನು 45 ರಿಂದ 25 ವರ್ಷದವರೆಗೂ ವಿಸ್ತರಿಸಬೇಕು" ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ರಾಜಕೀಯಕ್ಕಿಂತ ದೊಡ್ಡ ರಾಷ್ಟ್ರೀಯ ಸವಾಲು ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ 2ನೇ ಅಲೆ ದೇಶಕ್ಕೆ ಅಘಾತಕಾರಿಯಾಗಿ ಅಪ್ಪಳಿಸಿದೆ. ಆದರೆ, ನಮಗೆ ಒಂದು ವರ್ಷ ತಯಾರಿ ನಡೆಸಲು ಅವಕಾಶವಿದ್ದರೂ ದೇಶ ಈ ಪರಿಸ್ಥಿತಿ ತಲುಪಿರುವುದು ವಿಷಾದನೀಯ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಔಷಧಿಗಳ ಕೊರತೆ, ಲಸಿಕೆಗಳ ಕೊರತೆ, ವೈದ್ಯಕೀಯ ಆಮ್ಲಜನಕದ ಕೊರತೆ ಸಮಸ್ಯೆ ಕುರಿತು ಸುದ್ದಿಗಳು ಓದುವಾಗ ನನಗೆ ತುಂಬಾ ಕಳವಳವಾಗಿದೆ. ದೇಶಾದ್ಯಂತ ಕೊರೊನಾ ಲಸಿಕೆಯ ಕೊರತೆ, ರೆಮ್‍ಡೆಸಿವಿರ್‍ನಂತಹ ಜೀವ ಉಳಿಸುವ ಔಷಧಿಗಳ ಕೊರತೆಯ ಬಗ್ಗೆಯೂ ವರದಿಯಾಗುತ್ತಿದೆ ಇವುಗಳು ನನ್ನನ್ನು ಹೆಚ್ಚು ಕಳವಳಕ್ಕೆ ದೂಡಿವೆ ಎಂದಿದ್ದಾರೆ.

"ಕೊರೋನಾ ವಿಚಾರದಲ್ಲಿ ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಕೇಳುವ ಬದಲು, ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ನಾಯಕರ ಮೇಲೆ ಕೇಂದ್ರ ಸಚಿವರು ದಾಳಿ ನಡೆಸುತ್ತಿದ್ದಾರೆ" ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.


ADVERTISEMENT


ಹುಟ್ಟು ಹಬ್ಬದ ಶುಭಾಶಯಗಳು


Post a Comment

0 Comments

Ad Code

Responsive Advertisement