Ticker

6/recent/ticker-posts

Ad Code

Responsive Advertisement

NEWS BREAKING ! ಸರ್ಕಾರದ ಬಜೆಟ್ ಮಂಡನೆಯಲ್ಲಿ‌ ಕುರುಬರಿಗೆ ಅನ್ಯಾಯ ! ಮಾಚ್೯ 18ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ?



 ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ರಾಜ್ಯದ 2021-22ರ ಅಯ‌ವ್ಯಯ ಮಂಡನೆಯಲ್ಲಿ, ಕರ್ನಾಟಕದಲ್ಲಿರುವ ಅನೇಕ ದುರ್ಬಲ ವರ್ಗಗಳ ಜಾತಿಯ ಜನರಿಗೆ ಅಭಿವೃದ್ಧಿ ಹೊಂದುವ ಕಾರಣಕ್ಕಾಗಿ, ಕೋಟ್ಯಂತರ ರೂಪಾಯಿ ಹಣ ನಿಗದಿ ಪಡಿಸಿರುವುದಾಗಿ ಘೋಷಿಸಿದೆ.

  ಬಜೆಟ್ ಘೋಷಣೆಯ ಸಂದರ್ಭಕ್ಕೆ ವೀರಶೈವ, ಒಕ್ಕಲಿಗ, ಪರಿಶಿಷ್ಟ, ಅಲ್ಪಸಂಖ್ಯಾತ ಹಾಗೂ ಇತರೆ ಚಿಕ್ಕ ಪುಟ್ಟ ಜನಾಂಗವನ್ನು ಪರಿಗಣನೆಗೆ ತೆಗೆದುಕೊಂಡಿದೆ.ಎಂದು ಬುಡಕಟ್ಟು ಸಂಘರ್ಷ ಸಮೀತಿಯ ರಾಜ್ಯಾದ್ಯಕ್ಷ  ಲಕ್ಕವಳ್ಳಿ ಮಂಜುನಾಥ್, ಆಕ್ರೋಶ ವ್ಯಕ್ತಪಡಿಸಿದ್ದಾರೆ


  ಆದರೆ, ರಾಜ್ಯ ಸರ್ಕಾರವು ರಾಜ್ಯದ 30 ಜಿಲ್ಲೆಗಳಲ್ಲಿಯೂ ವಾಸವಾಗಿರುವ ಬಹುಸಂಖ್ಯಾತ  ಕುರುಬ ಜಾತಿಯ ಜನರು ಬಡತನ ರೇಖೆಯ ಕೆಳಸ್ತರದಲ್ಲೇ ಹಲವಾರು ದಶಕಗಳ ಕಾಲದ ನಂತರವೂ ದಾರಿದ್ರ್ಯದ ಜೀವನ ನಡೆಸುತ್ತಲಿದ್ದಾರೆ.  ಈ ಕುರುಬ ಜನರು ಶೈಕ್ಷಣಿಕ, ಸಾಮಾಜಿಕ,  ಔದ್ಯೋಗಿಕ ಮತ್ತು ಸಾಂಸ್ಕೃತಿಕ  ಮುನ್ನಡೆ ಸಾದಿಸಬೇಕಾಗಿದೆ.

       


ಇದಕ್ಕೆ ಮಾರಕವಾಗಿ ಸರ್ಕಾರವು  ಸಂಪೂರ್ಣ ನಿರ್ಲಕ್ಷ್ಯ ಧೋರಣೆಯ ಮುಖೇನ ಬಜೆಟ್ ನಲ್ಲಿ ಪರಿಗಣಿಸದಿರುವುದು ತಾರತಮ್ಯವೆನಿಸಿದೆ. ಇದಕ್ಕೆ ಪ್ರಮುಖ ಹೊಣೆಗಾರರೆಂದರೆ ಪ್ರಧಾನವಾಗಿ ಕುರುಬರ ಮತ ಬೆಂಬಲದಿಂದಲೇ ಕುರುಬರ ಜಾತಿಯ ಪ್ರಾತಿನಿಧ್ಯದಡಿಯಲ್ಲೇ  ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ಸಚಿವರಾಗಿರುವ ಕೆ. ಎಸ್. ಈಶ್ವರಪ್ಪ, ಎಂ. ಟಿ. ಬಿ. ನಾಗರಾಜ್, ಬೈರತಿ ಬಸವರಾಜ್ ಮತ್ತು ಆರ್. ಶಂಕರ್ ರವರುಗಳು ಸರ್ಕಾರದ ಗಮನ ಸಳೆಯುವುದರಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿದ್ದಾರೆ. ಕುರುಬ ಸಮಾಜದ ಅಭಿವೃದ್ದಿಯ ನೈತಿಕ  ಹೊಣೆಗಾರಿಕೆಯಿದ್ದರೂ ಕೂಡ, ಸದರಿ ಸಚಿವರುಗಳ ಕರ್ತವ್ಯ ಲೋಪವನ್ನು ರಾಜ್ಯಾದ್ಯಂತ ಇರುವ ಕುರುಬ ಸಮಾಜದ ಜಾಗೃತ ಮನಸುಗಳು, ಇವರ ವಿರುದ್ಧ ಪ್ರತಿರೋಧ ಪ್ರದರ್ಶನ ಮಾಡಲೇಬೇಕೆಂದು ನಮ್ಮ ಸಮಿತಿಯನ್ನು ಕರೆಮಾಡಿ ಒತ್ತಾಯಿಸುತ್ತಿದ್ದಾರೆ.   ಈ ನಿಟ್ಟಿನಲ್ಲಿ ನಮ್ಮ ಸಮಿತಿಯು ಗಂಭೀರವಾಗಿ ಚರ್ಚಿಸಿದೆ.


          ಆದಕಾರಣ,  ನಮ್ಮ ಸಮಿತಿಯು ಆಡಳಿತ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಕುರುಬರ ಪ್ರಾತಿನಿಧ್ಯದ ಮಂತ್ರಿಗಳಾಗಿರುವ ಕೆ. ಎಸ್. ಈಶ್ವರಪ್ಪ, ಎಂ. ಟಿ. ಬಿ. ನಾಗರಾಜ್, ಬೈರತಿ ಬಸವರಾಜ್ ಮತ್ತು ಆರ್. ಶಂಕರ್ ರವರುಗಳ ಸರ್ಕಾರದ ಗಮನ ಸೆಳೆಯುವ ಕರ್ತವ್ಯ ಲೋಪದ ವಿರುದ್ಧ ಜಾಗೃತ ಕುರುಬರೆಲ್ಲರೂ ದಿನಾಂಕ 18.03.2021ರ ಗುರುವಾರದಂದು ಬೆಳಿಗ್ಗೆ 11 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸ್ಥಾನದ ಸಾರ್ವಜನಿಕ ಪ್ರಧಾನ ಸ್ಥಳದಲ್ಲಿ ಕಪ್ಪು ಬಟ್ಟೆಯ ಮೌನಾಚರಣೆಯ ಮೂಲಕ "ಕುರುಬ ಸಚಿವರುಗಳ ವಿರುದ್ಧ ಕುರುಬರಿಂದಲೇ ಪ್ರತಿಭಟನೆ"ಯನ್ನು ಏರ್ಪಡಿಸಲಾಗಿದೆ.


                 ಈ ನಮ್ಮ ಸರ್ಕಾರದ ಗಮನ ಸೆಳೆಯುವ ಹಾಗೂ ಕುರುಬ ಸಚಿವರ ನಿರ್ಲಕ್ಷ್ಯ ಧೋರಣೆಯ ಖಂಡನಾ ಕಾರ್ಯಕ್ರಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡುತ್ತಿದ್ದು  ಸಾರ್ವಜನಿಕರು ಹಾಗೂ ಬುಡಕಟ್ಟು ಸಮುದಾಯದ ಜನ ಮತ್ತು ಕುರುಬ ಸಮುದಾಯದ ಯುವಕರು ಹಾಗೂ ಮುಖಂಡರು ಸಹಕಾರ ನೀಡಬೇಕೆಂದು ಬುಡಕಟ್ಟು ಸಂಘರ್ಷ ಸಮೀತಿಯ ರಾಜ್ಯಾದ್ಯಕ್ಷ  ಲಕ್ಕವಳ್ಳಿ ಮಂಜುನಾಥ್, ಮನವಿ ವ್ಯಕ್ತಪಡಿಸಿದ್ದಾರೆ

Post a Comment

0 Comments

Ad Code

Responsive Advertisement