Ticker

6/recent/ticker-posts

Ad Code

Responsive Advertisement

FIR ಗೆ ಹೆದರಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ...!

ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಪೂರಕವಾಗಿ ಇಂದು ಆಡಿಯೋ ಸಂಭಾಷಣೆಯೊಂದು ಹೊರ ಬಂದಿದೆ. ಸಿಡಿಯಲ್ಲಿರುವ ಯುವತಿ ತಮ್ಮ ವಕೀಲ ಜಗದೀಶ್ ಕುಮಾರ್ ಮೂಲಕ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ಹಾಕಿದ್ದಾರೆ. ಈ ಪ್ರಕರಣದ ಎಲ್ಲಾ ಬೆಳವಣಿಗೆ ಬಗ್ಗೆ ಮೂರು ಬಾರಿ ಮಾಧ್ಯಮಗಳ ಮುಂದೆ ಬಂದ ರಮೇಶ್ ಅವರು ಸಂಜೆ ವೇಳೆಗೆ ಆಡಿಯೋ ಹಾಗೂ ಎಫ್‍ಐಆರ್ ಬಗ್ಗೆ ಹುಬ್ಬೇರಿಸುವಂಥ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ ನಾಳೆ ಎಲ್ಲಕ್ಕಿಂತ ಅತಿದೊಡ್ದ ಬಾಂಬ್ ಸಿಡಿಸುತ್ತೇನೆ, ಸ್ವಲ್ಪ ಕಾಯಿರಿ ಎಂದು ಕುತೂಹಲ ಮೂಡಿಸಿದ್ದಾರೆ. ಹೊಸ ಆಡಿಯೋ ಔಟ್, ಡಿಕೆಶಿ ಹೆಸರು ಉಲ್ಲೇಖಿಸಿದ ಸಿಡಿ ಗರ್ಲ್ ಎಫ್‍ಐಆರ್ ಹಾಕಿದ ತಕ್ಷಣ ಅಪರಾಧಿಯಲ್ಲ, ಬೇಕಾದರೆ 302(ಕೊಲೆ ಆರೋಪ) ಹಾಕಲಿ, ನಾನು ತಪ್ಪು ಮಾಡಿಲ್ಲ, ನಾನು ಜಾಮೀನು ಪಡೆಯಲ್ಲ,


ಡಿ.ಕೆ ಶಿವಕುಮಾರ್ ನನ್ನ ಹಳೆಯ ಗೆಳೆಯ ಅವರಿಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ, ಅವರು ನನ್ನಂತೆ ರಾಜೀನಾಮೆ ನೀಡಬಾರದು ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ನಾನು ಹೆದರುವುದಿಲ್ಲ, ನಾನು ವಕೀಲರು ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ, ನಾಳೆ 4 ರಿಂದ 6 ಗಂಟೆ ವೇಳೆಯಲ್ಲಿ ದೊಡ್ಡ ಬಾಂಬ್ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.


Post a Comment

0 Comments

Ad Code

Responsive Advertisement