ಕರ್ನಾಟಕ ಜೀವವೈವಿಧ್ಯ ಮಂಡಳಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬಳಕೆ ಮತ್ತು ಲಾಭ ಹಂಚಿಕೆಯಿಂದ ಜೈವಿಕ ಸಂಪನ್ಮೂಲಗಳ ಸಂರಕ್ಷಣೆಯ ವೃತ್ತ ಪೂರ್ಣಗೊಳಿಸುವಿಕೆ ಮತ್ತು ಮಾದರಿ ಜಿಎಂಸಿಗಳಿಗೆ ಎಬಿಎಸ್ ಹಣ ಅನುದಾನ ವಿತರಣಾ ಕಾರ್ಯಕ್ರಮ ಸಮಾಲೋಚನಾ ಕಾರ್ಯಾಗಾರ ನಡೆಯಿತು. ಕರ್ನಾಟಕ ರಾಜ್ಯದಲ್ಲಿನ ಅಪರ ಮುಖ್ಯ ಕಾರ್ಯದರ್ಶಿಗಳು (ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ) ಇಲಾಖೆ, ಪ್ರಧಾನ ಕಾರ್ಯದರ್ಶಿಗಳು (ಜೀವಿ ಪರಿಸ್ಥಿತಿ ಮತ್ತು ಪರಿಸರ) ಕರ್ನಾಟಕ ಸರ್ಕಾರ, ಎಬಿಎಸ್ ಪರಿಣಿತ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸುಮಾರು 30 ಕಂಪನಿಗಳು 8 ತಾ. ಪಂ. ಬಿಎಂಸಿಗಳು ಮುಂತಾದವರು ಪಾಲ್ಗೊಂಡಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪರಿಸರ ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಹಾಗೂ ಡಾ. ವಾಹನ ಆಚಾರ್ಯ, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ ಪರಿಣಿತ ತಜ್ಞರು, ಮಾಜಿ ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಆಗಮಿಸಿದ್ದರು. ಶ್ರೀಯುತ ಅನಂತ ಹೆಗಡೆ ಆಶೀಸರ ಅಧ್ಯಕ್ಷರು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷತೆ ವಹಿಸಿದ್ದರು.
ಮಂಡಳಿಯ ಸದಸ್ಯ ಕಾರ್ಯದರ್ಶಿ ಪುನೀತ್ ಪಾಠಕ್, ಬಿಜೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀ ಮತಿ ತಾರಾ ಅನುರಾಧಾ, ಅಧ್ಯಕ್ಷರು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, 30 ಮಂಡಳಿಯ ತೋಟಗಾರಿಕಾ ಅಧಿಕಾರಿ ಶ್ರೀಮತಿ ಪವಿತ್ರ ಕೆ. ಮುಂತಾದವರು ಪಾಲ್ಗೊಂಡಿದ್ದರು.
0 Comments