Ticker

6/recent/ticker-posts

Ad Code

Responsive Advertisement

ಮುತ್ತೂಟ್ ಸಮೂಹದ ಅಧ್ಯಕ್ಷ ಎಂ.ಜಿ. ಜಾರ್ಜ್ ನಿಧನ

 ನವದೆಹಲಿ,: ಮುತ್ತೂಟ್ ಸಮೂಹ ಕಂಪನಿಗಳ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತ್ತೂಟ್ (71) ಅವರು ಶುಕ್ರವಾರ ರಾತ್ರಿ ದೆಹಲಿಯಲ್ಲಿ ನಿಧನರಾಗಿದ್ದಾರೆ. ಜಾರ್ಜ್ ಅವರು ಪತ್ನಿ ಸಾರಾ ಜಾರ್ಜ್ ಮುತ್ತೂಟ್ ಮತ್ತು ಇಬ್ಬರು ಮಕ್ಕಳಾದ ಜಾರ್ಜ್ ಎಂ. ಜಾರ್ಜ್ ಹಾಗೂ ಅಲೆಕ್ಸಾಂಡರ್ ಜಾರ್ಜ್ ಅವರನ್ನು ಅಗಲಿದ್ದಾರೆ.

1979ರಲ್ಲಿ ಮುತ್ತೂಟ್ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಾರ್ಜ್ ಅವರು ನಂತರ 1993ರಲ್ಲಿ ಅಧ್ಯಕ್ಷರಾಗಿ ಅದಿಕಾರ ವಹಿಸಿಕೊಂಡರು. ಮುತ್ತೂಟ್ ಫೈನಾನ್ಸ್ ಭಾರತದ ಅತಿ ದೊಡ್ಡ ಚಿನ್ನ ಸಾಲ ನೀಡುವ ಕಂಪನಿಯಾಗಿದ್ದು, ಐದು ಸಾವಿರಕ್ಕೂ ಅದಿಕ ಶಾಖೆಗಳನ್ನು ಹೊಂದಿದೆ.

ಮುತ್ತೂಟ್ ಸಮೂಹದ ಮೂರನೇ ತಲೆಮಾರಿನವರಾಗಿದ್ದ ದಿವಂಗತರು ಎಫ್‍ಐಸಿಸಿಐ ರಾಷ್ಟ್ರೀಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರು ಮತ್ತು ಎಫ್‍ಐಸಿಸಿಐ ಕೇರಳ ರಾಜ್ಯ ಕೌನ್ಸಿಲ್ ಅಧ್ಯಕ್ಷರಾಗಿದ್ದರು.

2011ರಲ್ಲಿ ಫೋಬ್ರ್ಸ್ ಇಂಡಿಯಾ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದಿದ್ದ ಅವರು 2019ರಲ್ಲಿ 44ನೇ ರ್ಯಾಂಕ್ ತಲುಪಿದ್ದರು ಎಂಬುದು ವಿಶೇಷ. ಫೋಬ್ರ್ಸ್ ಏಷಿಯಾ ಮ್ಯಾಗಜೈನ್‍ನಲ್ಲಿ ಇವರ ಸಾಧನೆ ಪ್ರಕಟಗೊಂಡಿದೆ.

ವಾರ್ತಾಜಾಲ VARTHAJALA

# 396, OOLIGA COMPLEX, SAMPIGE ROAD, MALLESWARAM, OPPOSITE ASHA SWEETS, BENGALURU 560 003. 
Phone : 080-23319247
editorvarthajala@gmail.com  |   www.varthajala.live. |


Post a Comment

0 Comments

Ad Code

Responsive Advertisement