-------------------------------
ಕೃಷ್ಣ ಪ್ರಿಯ ಕಲಾ ಬಳಗದ ವಾರ್ಷಿಕೋತ್ಸವ ಹಾಗೂ "ಸಾಹಿತ್ಯ-ಲಾಲಿತ್ಯ" ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಮಾರ್ಚ್ 28 ಭಾನುವಾರ ಮಲ್ಲೇಶ್ವರದ 15ನೇ ಅಡ್ಡರಸ್ತೆಯಲ್ಲಿರುವ ಶುಕ್ರ ಸಭಾಂಗಣದಲ್ಲಿ ಏರ್ಪಡಿಸಿತ್ತು. ಕನ್ನಡ ಪ್ರಾಧ್ಯಾಪಕರಾದ ಡಾ|| ಅನಸೂಯಾದೇವಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣ ಪ್ರಿಯ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ಬಾಲಾಜಿ ವಹಿಸಿದ್ದರು. ಬೆಂಗಳೂರಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀ ಹೆಚ್ ಎನ್ ಸುರೇಶ್ ಅವರು "ಸಾಹಿತ್ಯ-ಲಾಲಿತ್ಯ" ಕವನ ಸಂಕಲನ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಗಾಯಕರೂ ಹಾಗೂ ಚಂದ್ರಿಕಾ ಕಲಾ ಬಳಗದ ಸಂಸ್ಥಾಪಕರೂ ಆದ ಶ್ರೀಮತಿ ಚಂದ್ರಿಕಾ ಗಿರೀಶ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ADVERTISEMENT



0 Comments