ಬೆಂಗಳೂರು: ಮಲೆನಾಡು – ಕರಾವಳಿ ಪ್ರದೇಶದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದಿರುವ ಭಾರಿ ಭೂಕುಸಿತಗಳು, ಪ್ರಾಣಹಾನಿ ಆಗಿರುವ ಹಿನ್ನೆಲೆಯಲ್ಲಿ ಭೂ ಕುಸಿತ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ಕುರಿತು ಅಧ್ಯಯನ ಸಮಿತಿಯನ್ನು ಸರ್ಕಾರ 2020 ರ ಏಪ್ರಿಲ್‍ನಲ್ಲಿ ರಚಿಸಿತ್ತು.
ಇದೀಗ ಏಪ್ರಿಲ್ ಒಂದರಂದು ಭೂ ಕುಸಿತ ಅಧ್ಯಯನ ಸಮಿತಿ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಲಿದೆ. ಭೂ ಕುಸಿತವಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗಾ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಮಿತಿ ಭೇಟಿ ನೀಡಿ ಪರಿಶೀಲಿಸಿದೆ. ಕಣಿವೆಗಳ ಕುಸಿತ, ಜೀವಹಾನಿಯಾದ ಹಳ್ಳಿಗಳಿಗೆ ಭೇಟಿ, ಕಣಿವೆಯ ಹೊಲ-ತೋಟಗಳ ನಾಶ ಪರಿಶೀಲನೆ, ಸ್ಥಳೀಯ ಆಡಳಿತ ಕೈಗೊಂಡ ಕ್ರಮ, ಭೂ ಕುಸಿತಕ್ಕೆ ಕಾರಣಗಳು, ಕೈಗೊಳ್ಳಬೇಕಾದ ಪ್ರತಿಬಂಧಕ ಕ್ರಮಗಳು, ನೀತಿ ನಿರೂಪಣೆಯಲ್ಲಿ ಆಗಬೇಕಾದ ಬದಲಾವಣೆ, ಮುಂತಾದ ವಿಷಯಗಳ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಿದೆ.
ಸ್ಥಳೀಯ ರೈತರು, ಜನರು, ಅಧಿಕಾರಿಗಳು ಸಂಘ ಸಂಸ್ಥೆ, ಜನಪ್ರತಿನಿಧಿಗಳು ಇವರೆಲ್ಲರ ಅಭಿಪ್ರಾಯ ಪಡೆಯಲಾಗಿದೆ. ಹಲವು ತಜ್ಞರು ನೀಡಿರುವ ವರದಿಗಳ ಅಭಿಪ್ರಾಯ ಪಡೆಯಲಾಗಿದೆ.
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಶ್ರೀ ಅನಂತ ಹೆಗಡೆ ಅಶೀಸರ ಭೂ ಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷರು ಪಿ.ಸಿ. ಸಿ.ಎಫ್. ಅವರು ಸದಸ್ಯ ಕಾರ್ಯದರ್ಶಿ, ಭಾರತಿಯ ವಿಜ್ಞಾನ ಸಂಸ್ಥೆ ಇಸ್ತ್ರೋ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭಶಾಸ್ತ್ರ ಇಲಾಖೆ, ವಿಪತ್ತು ನಿರ್ವಹಣಾ ಇಲಾಖೆಯ ವಿಜ್ಞಾನಿಗಳು, ಈ ಸಮಿತಿಯ ಸದಸ್ಯರು, ಡಾ|| ಟಿ.ವಿ. ರಾಮಚಂದ್ರ, ಡಾ|| ಮಾರುತಿ, ಡಾ|| ಕೇಶವ ಕೊರ್ಸೆ, ಡಾ|| ಶ್ರೀನಿವಾಸ ರೆಡ್ಡಿ, ಡಾ|| ರಾಮನ್ ಹಿರಿಯ ಅರಣ್ಯ ಅಧಿಕಾರಿ ಶ್ರೀ ಬ್ರಿಜೇಶ್ ಕುಮಾರ, ಸಮಿತಿಯಲ್ಲಿ ಇದ್ದಾರೆ.
01.04.2021 ರಂದು ಬೆಳಿಗ್ಗೆ 11:00 ಘಂಟೆಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಭೂ ಕುಸಿತ ಅಧ್ಯಯನದ ಅಂತಿಮ ವರದಿ ಸಲ್ಲಿಕೆ ಆಗಲಿದೆ. ಕಂದಾಯ ಸಚಿವರು, ಮುಖ್ಯಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.
ಅಧ್ಯಕ್ಷರ ಆಪ್ತ ಕಾರ್ಯದರ್ಶಿ
ಕರ್ನಾಟಕಜೀವವೈವಿಧ್ಯ ಮಂಡಳಿ
ಮೊಬೈಲ್ ಸಂಖ್ಯೆ : 8861772403

0 Comments