Ticker

6/recent/ticker-posts

Ad Code

Responsive Advertisement

ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಸಲಹೆಗಾರ ಪಿ.ಕೆ. ಸಿನ್ಹಾ ರಾಜೀನಾಮೆ

‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರ ಪ್ರದೀಪ್ ಕುಮಾರ್ ಸಿನ್ಹಾ (ಪಿ.ಕೆ. ಸಿನ್ಹಾ) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.


1977ನೇ ಬ್ಯಾಚಿನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಿನ್ಹಾ ಅವರು ಮೋದಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ (ಒಎಸ್‌ಡಿ) ಕೆಲ ಕಾಲ ಕೆಲಸ ನಿರ್ವಹಿಸಿದ್ದರು. ಇದಾದ ಬಳಿಕ, ಸಿನ್ಹಾ 2019ರ ಸೆಪ್ಟೆಂಬರ್‌ನಲ್ಲಿ ಮೋದಿ ಅವರಿಗೆ ಪ್ರಧಾನ ಸಲಹೆಗಾರರಾಗಿ ನೇಮಕವಾಗಿದ್ದರು.

ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದ ಸಿನ್ಹಾ ಅವರನ್ನು 2019ರ ಆಗಸ್ಟ್‌ನಲ್ಲಿ ಮೋದಿ ಅವರ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಸಿನ್ಹಾ ಅವರು ವಿದ್ಯುತ್ ಸಚಿವಾಲಯದಲ್ಲೂ ಕಾರ್ಯದರ್ಶಿಯಾಗಿ ಕೆಲ ಕಾಲ ಕರ್ತವ್ಯ ನಿರ್ವಹಹಿಸಿದ್ದರು.

Post a Comment

0 Comments

Ad Code

Responsive Advertisement