"ಹುಬ್ಬಳ್ಳಿಯಿಂದ ಬೆಂಗಳೂರು ತಲುಪಲು ಸದ್ಯ 8 ತಾಸು ಬೇಕಾಗುತ್ತಿದೆ. ಸೂಪರ್ ಫಾಸ್ಟ್ ರೈಲು ಆರಂಭವಾದರೆ ನಾಲ್ಕೂವರೆ ತಾಸಿನಲ್ಲಿ ತಲುಪಬಹುದಾಗಿದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದರು."ಸೂಪರ್ ಫಾಸ್ಟ್ ರೈಲು ಆರಂಭವಾದರೆ ಜನರ ಸಮಯ ಉಳಿತಾಯವಾಗಲಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಮೌಖಿಕವಾಗಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಮುಂದಿನ 6 ತಿಂಗಳಿನಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.
ಬೆಳಗಿನ ಜಾವ ವಿಮಾನ ಹಾರಾಟ ಆರಂಭ: ಜೂನ್ ತಿಂಗಳಿನಿಂದ ಬಹುಶಃ ಹುಬ್ಬಳ್ಳಿ-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
0 Comments