Ticker

6/recent/ticker-posts

Ad Code

Responsive Advertisement

ವಿಕಲಚೇತನರು ಸಹ ಎಲ್ಲರಂತೆ ಜೀವನ ಸಾಗಿಸಬೇಕು .-ಭೈರತಿ ಸುರೇಶ್

ಹೆಬ್ಬಾಳ ವಿಧಾನಸಭಾ ಕ್ಷೇತ್ರ ,ಚಾಮುಂಡಿನಗರ ಟ್ರಲ್ಲಿಯಂ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಬಿ.ಬಿ.ಎಂ.ಪಿ.ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತರಿಗೆ 24 ತ್ರಿಚಕ್ರ ವಾಹನಗಳನ್ನು ಶಾಸಕರಾದ ಭೈರತಿ ಸುರೇಶ್ ರವರು ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಮಾಜಿ ಪಾಲಿಕೆ ಸದಸ್ಯ ಆನಂದ್ ರವರು ಅರ್ಹ ಫಲಾನುಭವಿಗಳಿಗೆ ತ್ರಿ ಚಕ್ರ ವಾಹನದ ಕೀ ಹಸ್ತಾಂತರ ಮಾಡುವ ಮೂಲಕ ಉದ್ಘಾಟನೆ .


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ,ಹೆಬ್ಬಾಳ ಕಾಂಗ್ರೆಸ್ ವಿವಿಧ ಘಟಕದ ಅಧ್ಯಕ್ಷರು ,ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಭೈರತಿ ಸುರೇಶ್ ರವರು  ಮಾತನಾಡಿ ರೇಷನ್ ,ಮಾಸ್ಕ್ ಕೊಡುವುದು ವಿಶೇಷವಲ್ಲ ವಿಕಲಚೇತನರು ಸಹ ನಮ್ಮಂತೆ ಸಮಾಜವನ್ನು ನೋಡಬೇಕು ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.


ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಆಶಯದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಿಗಬೇಕು ವಿಕಲಚೇತನರು ಸಹ ಎಲ್ಲರಂತೆ ಜೀವನ ಸಾಗಿಸಬೇಕು .ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು.

ಬಡವರು ಎಲ್ಲ ಜಾತಿಯಲ್ಲಿ ಇದ್ದಾರೆ .ಬಡವರ ಅಭಿವೃದ್ದಿಯೆ ನಮ್ಮ ಗುರಿಯಾಗಬೇಕು .

ನಾವೆಲ್ಲರು ಒಂದೇ ಎಂದು ಸಾರುವ ಸಮಯ ಬಂದಿದೆ ಕೋಮುವಾದಿಗಳು ,ಜಾತಿವಾದಿಗಳಿಂದ ನಮ್ಮ ದೇಶ ರಕ್ಷಣೆ ಮಾಡಬೇಕಾದ ಸಂದರ್ಭ ಬಂದಿದೆ.

ಮಾಜಿ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಮಾತನಾಡಿ ಹುಟ್ಟು ಅಕಸ್ಮಿಕ ಸಾವು ಖಚಿತ ನಾವು ಮಾಡುವ ಕೆಲಸ ಶಾಶ್ವತ. ವಿಕಲಚೇತನರು ಸಾಮಾನ್ಯ ಜನರಂತೆ ಜೀವನ ಸಾಗಿಸಬೇಕು .ಅವರು ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು.


ಬಡವರಿಗೆ ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ತಲುಪಿಸುವ ಜವದ್ದಾರಿ ನಮ್ಮದು .ಶಾಸಕರಾದ ಭೈರತಿ ಸುರೇಶರವರ ನೇತೃತ್ವದಲ್ಲಿ  ಹೆಬ್ಬಾಳ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement