ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಪೊಲೀಸರು ನಿನ್ನೆ ದಿನೇಶ್ ಕಲ್ಲಹಳ್ಳಿ ಅವರು ಪೊಲೀಸರ ಮುಂದೆ ಸಾಕಷ್ಟು ಹೈಡ್ರಾಮ ಮಾಡಿದ್ದು, ಉಲ್ಟಾ ಸಹ ಹೊಡೆದರೆನ್ನಲಾಗಿದೆ. ಒಮ್ಮೆ ಸ್ನೇಹಿತನ ಮೂಲಕ ಸಿಡಿ ತಗೊಂಡೆ ಅಂದ ವ್ಯಕ್ತಿ ನಂತರ ಅಪರಿಚಿತ ವ್ಯಕ್ತಿಯಿಂದ ಸಿಡಿ ಪಡೆದೆ ಅಂತಿದ್ದಾರೆ.
ದಿನೇಶ್ ಕಲ್ಲಹಳ್ಳಿ ಮಾರ್ಚ್ 1 ರಂದು ಗಾಂಧಿನಗರದ ರಾಮಕೃಷ್ಣ ಲಾಡ್ಜ್ ನಲ್ಲಿ ತನ್ನ ಸ್ನೇಹಿತನ ಮೂಲಕ ಸಿಡಿ ಪಡೆದೆ ಅಂತ ಮೂರು ದಿನಗಳ ಹಿಂದೆ ಇದೇ ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದ್ರೆ ಇವತ್ತಿನ ವಿಚಾರಣೆ ವೇಳೆ ನನಗೆ ಸಿಡಿ ಕೊಟ್ಟ ಅಪರಿಚಿತ ವ್ಯಕ್ತಿ ಯಾರೂ ಅನ್ನೋದೇ ಗೊತ್ತಿಲ್ಲ ಅಂದಿದ್ದಾನೆ. ಆದ್ರೆ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಲಾಡ್ಜ್ ನಲ್ಲಿ ಕಲ್ಲಹಳ್ಳಿ ಸುಳಿವೇ ಪೊಲೀಸರಿಗೆ ಸಿಕ್ಕಿಲ್ಲ. ಇದನ್ನು ಕೇಳಿದಾಗ ಅವರು, ತಾನು ಕ್ಯಾಮೆರಾ ಫೋಕಸ್ ಇಲ್ಲದ ಬದಿಯೊಂದರಲ್ಲಿ ಇದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಮೊದಲು ಸ್ನೇಹಿತನ ಮೂಲಕ ಸಿಡಿ ಪಡೆದೆ ಅಂದಿದ್ದ ಕಲ್ಲಹಳ್ಳಿ, ಅಪರಿಚಿತ ವ್ಯಕ್ತಿಯಿಂದ ಪಡೆದೆ ಎಂಬ ಹೇಳಿಕೆ ಕೊಟ್ಟಿದ್ದಾರೆ.
ಸಿಡಿ ಜೊತೆಗೆ ಯುವತಿಯ ಬಗ್ಗೆಯೂ ಪೊಲೀಸರು ಸಾಕಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ. ಯುವತಿ ಯಾರು..? ನಿನಗೆ ಹೇಗೆ ಪರಿಚಯ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಮಾಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ದಿನೇಶ್ ಸ್ಪಷ್ಟ ಉತ್ತರ ನೀಡಿಲ್ಲ. ಯುವತಿ ನನಗೆ ನೇರ ಪರಿಚಯ ಇಲ್ಲ. ತನಗೆ ಇರೋ ಮಾಹಿತಿ ಕೊಟ್ಟಿದ್ದೀನಿ ಅಂದಿದ್ದಾರೆ ರಮೇಶ್ ಕಲ್ಲಹಳ್ಳಿ.
ದಿನೇಶ್ ಕಲ್ಲಹಳ್ಳಿ ವಿಚಾರಣೆ ಆಗುತ್ತಿರುವ ಬೆನ್ನಲ್ಲೇ ಮಹಿಳಾ ಆಯೋಗ ಸಹ ಗೋಕಾಕ್ ಸಾಹುಕಾರರಿಗೆ ಶಾಕ್ ಕೊಟ್ಟಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಲು ಮಹಿಳಾ ಆಯೋಗ ನಿರ್ಧಾರ ಸಹ ಮಾಡಿದೆ. ಯುವತಿಯ ಬಗ್ಗೆ ಮಾಹಿತಿ ಕಲೆಹಾಕಲು ಮಹಿಳಾ ಆಯೋಗ ನಿzರ್ಧರಿಸಿದೆ. ಕೆಲವೇ ದಿನಗಳಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್‍ಪೆಕ್ಟರ್‍ಗೆ ನೊಟೀಸ್ ಕೊಟ್ಟು ಪ್ರಾಥಮಿಕ ಮಾಹಿತಿ ಕಲೆಹಾಕಲಿದೆ. ಇದರ ಜೊತೆಗೆ ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿಗೂ ನೊಟೀಸ್ ಕೊಟ್ಟು ವಿಚಾರಣೆ ನಡೆಸಲಿದ್ದಾರೆ. ಯುವತಿಯ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಆಕೆಯ ಸ್ಟೇಟ್ಮೆಂಟ್ ಪಡೆದು ನಂತರ ಜಾರಕಿಹೊಳಿ ಅವರ ವಿಚಾರಣೆ ಮಾಡಲಿದೆ ಮಹಿಳಾ ಆಯೋಗ.
ದೂರು ದಾಖಲಾಗಿ ನಾಲ್ಕು ದಿನಗಳಾದ್ರೂ ಪೊಲೀಸರು ಮಾತ್ರ ಇನ್ನೂ ಎಫ್‍ಐಆರ್ ದಾಖಲು ಮಾಡಿಲ್ಲ. ಸದ್ಯ ಪ್ರಕರಣದ ಕುರಿತು ಸಾಕಷ್ಟು ಮಾಹಿತಿ ಕಲೆಹಾಕುತ್ತಿದ್ದು ಬಹುಶ ಇವತ್ತು ಒಳಗೆ ಎಫ್‍ಐಆರ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಇದುವರೆಗಿನ ವಿಚಾರಣೆಯಲ್ಲಿ ಪೊಲೀಸರಿಗೆ ಯುವತಿ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ.

0 Comments