ದಿಗ್ಗಜ ಆಟಗಾರ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೊರೊನಾ ವೈರಸ್‌ಗೆ ತುತ್ತಾಗಿದ್ದು ಸದ್ಯ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತೆಂಡೂಲ್ಕರ್‌ಗೆ ಸಣ್ಣ ಪ್ರಮಾಣದಲ್ಲಿ ಲಕ್ಷಣಗಳು ಮಾತ್ರವೇ ಕಾಣಿಸಿಕೊಂಡಿದ್ದರು ಅಭಿಮಾಮಿಗಳು ಆತಂಕಗೊಂಡಿದ್ದು ಶೀಘ್ರ ಚೇತರಿಕೆಗಾಗಿ ಹಾರೈಸುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸಚಿನ್ ತೆಂಡೂಲ್ಕರ್‌ಗೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ. 1999-2000ನೇ ಇಸವಿಯ ಪಂದ್ಯವೊಂದರ ವಿಶೇಷ ಫೋಟೋವನ್ನು ಶೋಯೆಬ್ ಅಖ್ತರ್ ಹಂಚಿಕೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಶೋಯೆಬ್ ಅಖ್ತರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
1999-2000ನೇ ಇಸವಿಯಲ್ಲಿನ ಭಾರತ-ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ತ್ರಿಕೋನ ಸರಣಿಯ ಫೋಟೋ ಇದಾಗಿದೆ. ಸಚಿನ್ ಹಾಗೂ ಶೋಯೆಬ್ ಅಖ್ತರ್ ಮುಖಾಮುಖಿಯಾಗುವ ಚಿತ್ರ ಇದಾಗಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಶೋಯೆಬ್ ಅಖ್ತರ್ ' ಅಂಗಳದಲ್ಲಿ ನನ್ನ ನೆಚ್ಚಿನ ಎದುರಾಳಿಗಳಲ್ಲಿ ಒಬ್ಬರು" ಎಂದು ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ಬಳಿಕ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್‌ಗೂ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಎಲ್ಲರೂ ಇತ್ತೀಚೆಗೆ ಅಂತ್ಯವಾದ "ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ" ಇಂಡಿಯಾ ಲೆಜೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದರು.

0 Comments