Ticker

6/recent/ticker-posts

Ad Code

Responsive Advertisement

ಅಮೃತಹಳ್ಳಿ ಕನ್ನಕಳವು ಮಾಡುತ್ತಿದ್ದ ಆರೋಪಿಗಳ ಬಂಧನ:

ರಾತ್ರಿ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ರಾಯಲ್ ಎನ್‍ಕ್ಲೇವ್‍ನಲ್ಲಿ ಶ್ರೀ.ಅಕ್ತರ್ ಅದ್ನಾನ್ ಎಂಬುವರ ಮನೆಯ ಬೀಗ ಮುರಿದು ಸುಮಾರು 400 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಕಳವು ಪ್ರಕರಣ ದಾಖಲಾಗಿರುತ್ತದೆ. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ ರವರು ಶ್ರೀ.ಕೆ.ಎಸ್ ನಾಗರಾಜ್ ಎಸಿಪಿ ಸಂಪಿಗೇಹಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಸುರೇಶ್ ಹೆಚ್.ವಿ ಪಿ.ಐ ಅಮೃತಹಳ್ಳಿ ಮತ್ತು ಮಂಜುನಾಥ ಪಿ.ಐ ಕೊತ್ತನೂರು ಹಾಗೂ ಸಿಬ್ಬಂದಿಯವರೊನ್ನೊಳಗೊಂಡ ತಂಡವನ್ನು ರಚನೆ ಮಾಡಿರುತ್ತದೆ. 

ತನಿಖೆಯನ್ನು ಕೈಗೊಂಡ ತಂಡಕ್ಕೆ ಕೃತ್ಯವು ನೇಪಾಳಿ ದೇಶದ ಪ್ರಜೆಗಳು ಕಳವು ಮಾಡಿಕೊಡು ಚಿನ್ನದ ಒಡವೆಗಳ ಸಮೇತ ತಮ್ಮ ದೇಶಕ್ಕೆ ಹೋಗುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ದೊರೆಯುತ್ತದೆ. 

ಕೂಡಲೇ ಕಾರ್ಯಪ್ರವೃತ್ತರಾದ ತನಿಖಾ ತಂಡವು ಅರೋಪಿಗಳ ಚಲನವಲಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿಗಳು ಮೆಜೆಸ್ಟಿಕ್‍ನಲ್ಲಿ ಬಸ್‍ಗಾಗಿ ಕಾಯುತ್ತಿದ್ದಾಗ ಪೊಲೀಸರನ್ನು ನೋಡಿದ ಆರೋಪಿಗಳನ್ನು ಅಲ್ಲಿಂದ ತಪ್ಪಿಸಿಕೊಂಡು ಹೋಡಿಹೋಗಲು ಪ್ರಯತ್ನಿಸುತ್ತಾರೆ. ಕೂಡಲೇ ತನಿಖಾ ತಂಡದಲ್ಲಿನ ಅಧಿಕಾರಿ/ಸಿಬ್ಬಂದಿಗಳು ಅವರನ್ನು ಹಿಡಿದು ವಿಚಾರಣೆ ಮಾಡಿದಾಗ 

ಪ್ರಕಾಶ ಶಾಹಿ, ಉದಯ ಕುಮಾರ, ರೋಷನ್ ಬಿμÁ್ಠ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಲ್ಲ ಆರೋಪಿಗಳು ಮೂಲತಃ ನೇಪಾಳ ದೇಶದವರಾಗಿದ್ದು ಬೆಂಗಳೂರು ನಗರದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಾ, ರಾತ್ರಿ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬಾಗಿಲು ಮುರಿದು ಕಳವು ಮಾಡಿಕೊಂಡು ನೇಪಾಳಕ್ಕೆ ಹೋಗುವುದಾಗಿ ತಿಳಿದು ಬಂದಿರುತ್ತದೆ. 

ಕೃತ್ಯ ನಡೆದ 48 ಗಂಟೆಗಳಲ್ಲಿ 3 ಜನ ಆರೋಪಿಗಳನ್ನು ಪತ್ತೆ ಮಾಡಿ ಸುಮಾರು 13 ಲಕ್ಷ ಮೌಲ್ಯದ 325 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತದೆ. 

 ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು  ತನಿಖಾ ತಂಡಕ್ಕೆ ಕಾರ್ಯವನ್ನು  ಪ್ರಶಂಸಿಸಿ ರೂ 30,000/- ನಗದು ಬಹುಮಾನವನ್ನು ನೀಡಿರುತ್ತಾರೆ.


Post a Comment

0 Comments

Ad Code

Responsive Advertisement