Ticker

6/recent/ticker-posts

Ad Code

Responsive Advertisement

ಶ್ರೀ ವಾದಿರಾಜರ ಆರಾಧನೆಯ ಪ್ರಯುಕ್ತ "ಗೋಷ್ಠಿ -ಗಾಯನ"

 ಶ್ರೀ ವಾದಿರಾಜರ ಆರಾಧನೆಯ ಪ್ರಯುಕ್ತ "ಗೋಷ್ಠಿ -ಗಾಯನ" 


ಶ್ರೀ ವಾದಿರಾಜರು ಸಜೀವ ಬೃಂದಾವನಸ್ಥರಾಗಿದ್ದು ಶ್ರೀ ಶಾರ್ವರಿ ನಾಮ ಸಂವತ್ಸರ ಫಾಲ್ಗುಣ ಬಹುಳ ತೃತೀಯ. ಅವರ ಜೀವಮಾನ ೧೨೦ ವರ್ಷದ ಇದು ಶಾರ್ವರಿ ಸಂವತ್ಸರ ಮತ್ತು ೪೨೧ ನೇ ವರ್ಷದ ಆರಾಧನೆ ಪ್ರಯುಕ್ತ ಮತ್ತಿಕೆರಿ ರಾಘವೇಂದ್ರಸ್ವಾಮಿ ಮಠದಲ್ಲಿ ಭಜನೆ , ಗೋಷ್ಠಿ ಹಾಗು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 


ಕಾರ್ಯಕ್ರಮದ ಅಧ್ಯಕ್ಷತೆ ಡಾ. ಏನ್  ಜಿ  ವಿಜಯಲಕ್ಷ್ಮಿ ಅವರು ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ದಾಸವಾಣಿ ಫೇಸ್ಬುಕ್ ಸಂಸ್ಥಾಪಕರಾದ ಶ್ರೀ ಜಯರಾಜ್ ಕುಲ್ಕರ್ಣಿ ಮತ್ತು ಮಠದ ಸಮಸ್ತ ಕಾರ್ಯಕಾರಿ ಸಮಿತಿ ಮತ್ತು ವ್ಯಸ್ಥಾಪಕರು ಉಪಸ್ಥಿತರಿದ್ದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮತ್ತಿಕೆರಿ ಮಧ್ವ ಮಹಿಳಾ ಮಂಡಳಿ ಮತ್ತು ಅಮರಜ್ಯೋತಿ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಕುಮಾರಿ ಅನಘ ಕೌಶಿಕ್, ಕುಮಾರಿ ರಕ್ಷಿತಾ , ಶ್ರೀಮತಿ ದೀಪ್ತಿ ಯೆಶಸ್ ಮತ್ತು ಶ್ರೀಮತಿ ನಾಗಸುಮನಾ ಹರಿಪ್ರಸಾದ್ ಅವರಿಂದ ವಾದಿರಾಜರ ಕುರಿತು ಗೋಷ್ಠಿ ನಡೆಯಿತು. ರಸಪ್ರೇಶ್ನೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ದಾಸವಾಣಿ ಸಂಸ್ಥಾಪಕರಾದ ಜಯರಾಜ್ ಕುಲ್ಕರ್ಣಿ ಅವರಿಗೆ ಮಠದ ವತಿಯಿಂದ ಸನ್ಮಾನಿಸಲಾಯಿತು.




Post a Comment

0 Comments

Ad Code

Responsive Advertisement