ಬೆಂಗಳೂರಿನಲ್ಲಿ 1200 ಉದ್ಯಾನವನಗಳಿದ್ದು , ಅಂತಹ ಪಾರ್ಕ್‍ಗಳಲ್ಲಿ ನಾಗರಿಕರಿಗೆ ಉತ್ತಮ ಆಮ್ಲಜನಕ ಮತ್ತು ಉಲ್ಲಾಸವನ್ನು ಒದಗಿಸುವ ಗುರಿ ಇರಿಸಿಕೊಂಡಿದ್ದು, ಹೀಗಾಗಿ ಪ್ರಸಕ್ತ ಬಜೆಟ್‍ನಲ್ಲಿ 214 ಕೋಟಿ ರೂ.ಗಳ ಬೃಹತ್ ಅನುದಾನ ಮೀಸಲಿರಿಸಲಾಗಿದೆ. ಕಳೆದ ಸಾಲಿನಲ್ಲಿ ಉದ್ಯಾನವನಗಳ ನಿರ್ವಹಣೆಗೆ ಕೇವಲ 84 ಕೋಟಿ ರೂ.ಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ 214 ಕೋಟಿ ರೂ.ಗಳ ಬೃಹತ್ ಅನುದಾನವನ್ನು ಮೀಸಲಿಡುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸೂಚನೆ ನೀಡಿದ್ದಾರೆ.
ಉದ್ಯಾನವನಗಳ ನಿರ್ವಹಣೆಯನ್ನು ವಾರ್ಡ್‍ವಾರು ಟೆಂಡರ್ ಮೂಲಕ ಆಹ್ವಾನಿಸಿ ಪಾರ್ಕ್‍ಗಳ ನಿರ್ವಹಣೆ ಮಾಡುವ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸಲಾಗುವುದು. ಉದ್ಯಾನವನಗಳ ನಿರ್ವಹಣೆಯ ಬಗ್ಗೆ ವಾರ್ಡ್ ಸಮಿತಿ ನೀಡುವ ವರದಿಯನ್ನು ಆದರಿಸಿ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಾಗುವುದು.

0 Comments