Ticker

6/recent/ticker-posts

Ad Code

Responsive Advertisement

ದರೋಡೆಗೆ ಸಂಚು ರೂಪಿಪಿ ಕೊಲೆ ಮಾಡಲು ಲಾಂಗ್-ಮಚ್ಚುಗಳನ್ನು ಇಟ್ಟುಕೊಂಡಿದ್ದ ಆರೋಪಿಗಳ ಬಂಧನ

  ರಾತ್ರಿ ಮಾರತ್ತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಹಾರಿಜನ್ ರಸ್ತೆಯಲ್ಲಿ ಎರಡು ಕಾರ್‍ಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುವ ಹಣವಂತರನ್ನು ಗುರುತಿಸಿ ಅವರ ಮೇಲೆ ಹಲ್ಲೆ ಮಾಡಿ ಅವರಿಂದ ನಗದು-ಚಿನ್ನದ ಆಭರಣಗಳನ್ನು ದೋಚಲು ಮತ್ತು ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರುಗಳನ್ನು ಕೊಲೆ ಮಾಡಲು ಸಜ್ಜಾಗಿದ್ದ ಆಸಾಮಿಗಳಾದ 

1. ಹರೀಶ ಎಸ್ ಬಿನ್ ಸಂಪಂಗಿರಾಮಯ್ಯ, 27 ವರ್ಷ,  2. ವೆಂಕಟೇಶ್ ಪಿ ಬಿನ್ ಪಾಪಣ್ಣ, 27 ವರ್ಷ, ವಾಸ : ಕೇರಾಫ್ ರೋಹಿತ್,  3. ಕಿರಣ್‍ಗೌಡ ಬಿನ್ ಸೀನಪ್ಪಗೌಡ, 30 ವರ್ಷ, ವಾಸ: ಮನೆ ದೇವಸ, ಶಿಶಿಲಾ ಗ್ರಾಮ,  4. ವಿಶ್ವನಾಥ ಭಂಡಾರಿ ಬಿನ್ ರಾಘವ ಭಂಡಾರಿ, 32 ವರ್ಷ,  5. ಸತೀಶ್ ಎಸ್ ಬಿನ್ ಶಕ್ತಿವೇಲು 27 ವರ್ಷ,  6. ಹೇಮಂತ್ ಎಲ್ ಬಿನ್ ಲಿಂಗಹನುಮಯ್ಯ, 28 ವರ್ಷ,  7. ಗಣೇಶ ಟಿ. ಬಿನ್ ತಂಗವೇಲು, 27 ವರ್ಷ,  8. ಗಣೇಶ್ ಎನ್ ಬಿನ್ ನಾಗರಾಜು, 27 ವರ್ಷ, 9. ವಿನೋದ್ ಎನ್ ಬಿನ್ ಲೇಟ್ ನಟರಾಜ್, 28  10. ಕಿರಣ್ ಕುಮಾರ್ ಬಿನ್ ಪ್ಯಾಟ್ರಿಕ್, 27 ವರ್ಷ, 11. ಅಣ್ಣಮಲೈ ವಿ ಬಿನ್ ವಡಿವೇಲು, 29 ವರ್ಷ,  



ಕಿರಣ್‍ಗೌಡ ಹಾಗೂ ವಿಶ್ವನಾಥ ಭಂಡಾರಿ ಇವರುಗಳು ಮಂಗಳೂರು ಮೂಲದ ರೌಡಿಯ ಸಹಚರರಾಗಿದ್ದು, ಇವರುಗಳನ್ನು ತಲೆ ಮರೆಸಿಕೊಂಡಿರುವ ರೌಡಿ ಆಸಾಮಿಯಾದ ಕಾಡು ಬೀಸನಹಳ್ಳಿ ರೋಹಿತ್ ಈತ ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರುಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿಸುವ ಸಲುವಾಗಿಯೇ ಕಿರಣ್ ಗೌಡ ಮತ್ತು ವಿಶ್ವನಾಥ್ ಬಂಡಾರಿ ರವರುಗಳನ್ನು ಮಂಗಳೂರಿನಿಂದ 20 ದಿನಗಳ ಹಿಂದೆಯೇ ಕರೆಯಿಸಿ ಕರಿಯಮ್ಮನ ಅಗ್ರಹಾರದಲ್ಲಿ ತನ್ನ ಬಳಿ ಇಟ್ಟುಕೊಂಡು ಕಾಡು ಬೀಸನಹಳ್ಳಿ ಸೋಮ ಮತ್ತು ಆತನ ಸಹಚರರುಗಳ ಚಲನವಲನಗಳ ಬಗ್ಗೆ ಗಮನಿಸುತ್ತಿರುವುದು ತನಿಖೆ ಸಮಯದಲ್ಲಿ ತಿಳಿದು ಬಂದಿರುತ್ತದೆ. 



ಇವರುಗಳನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡು ಕೃತ್ಯಕ್ಕೆ ಬಳಸಿದ್ದ 18 ಮಾರಕಾಸ್ತ್ರಗಳು ಮತ್ತು ಒಂದು ಸ್ಕಾರ್ಫಿಯೊ ಹಾಗೂ ಒಂದು ಹುಂಡೈ ಐ20 ಕಾರ್‍ಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರುಗಳ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ. 


Post a Comment

0 Comments

Ad Code

Responsive Advertisement