Ticker

6/recent/ticker-posts

Ad Code

Responsive Advertisement

ಕಾರು-ಬೈಕ್ ಡಿಕ್ಕಿ - ಇಬ್ಬರ ಕೊಂದ ಚಾಲಕ ಪೊಲೀಸರ ವಶಕ್ಕೆ...!

ಬೆಂಗಳೂರು : ಅಸದೃಶ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಡುಗುವಂತೆ ಮಾಡಿತ್ತು. ಈ ಭೀಕರ ಅಪಘಾತ ಎಸಗಿ ತಪ್ಪಿಸಿಕೊಂಡು ಪರಾರಿ ಯಾಗಿದ್ದ ಕಾರು ಚಾಲಕ ಈಗ ಪೊಲೀಸರ ಮುಂದೆ ಮಂಡಿಯೂರಿ ಕುಳಿತಿದ್ದಾನೆ. ಇನ್ನು, ಈ ಅಪಘಾತದ ಬಗ್ಗೆ ಚಾಲಕ ಬಹಳ ಸೊಗಸಾಗಿ ಕಥೆ ಕಟ್ಟಿದ್ದ. ಆದರೆ, ಪೊಲೀಸರು ಚಾಕಚಕ್ಯತೆಯಿಂದ ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ರಾತ್ರಿ ಎಚ್‍ಎಂಟಿ ಕಾರ್ಖಾನೆ ಲಿಂಕ್ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣನಾದ ಕಾರು ಚಾಲಕ ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾದನಾಯಕನಹಳ್ಳಿ ನಿವಾಸಿ ಭರತ್ ಎಂಬಾತ ಅಪಘಾತ ಎಸಗಿದ್ದು ಯಶವಂತಪುರ ಸಂಚಾರಿ ಪೊಲೀಸರು ಆತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಭರತ್ ಟ್ರಾವೆಲ್ ನಡೆಸುತ್ತಿದ್ದು, ಮಂಗಳವಾರ ರಾತ್ರಿ 1.20ರಲ್ಲಿ ಹೊಟೇಲ್ ನಲ್ಲಿ ಊಟ ತೆಗೆದುಕೊಂಡು ಮನೆಗೆ ಹೋಗುತ್ತಿದ್ದನಂತೆ. ಜಾಲಹಳ್ಳಿ ವಿಲೇಜ್ ಕಡೆಯಿಂದ ತುಮಕೂರು ರಸ್ತೆ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ನಿಧಾನವಾಗಿ ಮೂವ್ ಆಗುತ್ತಿದ್ದ ಬೈಕ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಶ್ರೀಕಾಂತ್ ಮತ್ತು ಗೌತಮ್ ಇಬ್ಬರು ಸವಾರರೂ ಮೃತಪಟ್ಟಿದ್ದರು. ಅಪಘಾತವೆಸಗಿ ಕಾರು ನಿಲ್ಲಿಸದೆ ಹೊರಟಿದ್ದ ಚಾಲಕ ಭರತ್ ಬಳಿಕ ಮಾದಾವರ ಬಳಿ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದ.

ಈ ಭೀಕರ ಅಪಘಾತದ ಬಗ್ಗೆ ಯಶವಂತಪುರ ಪೊಲೀಸರು ದೂರು ದಾಖಲಿಸಿಕೊಂಡು ಕಾರು ಮತ್ತು ಚಾಲಕನ ಪತ್ತೆಗೆ ಮುಂದಾಗಿದ್ದರು. ಲಿಂಕ್ ರಸ್ತೆಯ ಅಪಾರ್ಟ್‍ಮೆಂಟ್ ಸಿಸಿಟಿವಿ ಪರಿಶೀಲನೆ ನಡೆಸಿ ಕಾರಿನ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಹಾಗೂ ರಸ್ತೆಯ ಇತರ ಸಿಸಿಟಿವಿಗಳನ್ನ ಪತ್ತೆ ಹಚ್ಚಿದ್ದು ಕಾರು ಎಲ್ಲಿಂದ ಬಂದಿತ್ತು, ಯಾವ ಮಾರ್ಗದಲ್ಲಿ ಸಾಗಿದೆ ಅನ್ನೋದನ್ನ ಸಂಪೂರ್ಣ ಪರಿಶೀಲನೆ ನಡೆಸಿದ್ದರು. ಅದರೆ ಅಷ್ಟಾಗಿ ಸಾಕ್ಷಿ ದೊರೆಯದೆ ಇದ್ದಾಗ ಅಪಘಾತ ಸ್ಥಳದಲ್ಲಿದ್ದ ಕಾರಿನ ನಂಬರ್ ಫ್ಲೇಟ್ ನ ಚೂರು ಹಿಡಿದು ಪೊಲೀಸರು ಕಾರು ಪತ್ತೆ ಹಚ್ಚಲು ಮುಂದಾಗಿದ್ದರು. ಕಾರಿನ ನಂಬರ್ ಫ್ಲೇಟ್ ಚೂರಿನೊಂದಿಗೆ ಪೊಲೀಸರು ಜೆಸಿ ನಗರದ ಹಲವು ಅಂಗಡಿಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ 15  ಕಾರುಗಳಿಗೆ ಈ ರೀತಿಯ ನಂಬರ್ ಫ್ಲೇಟ್ ಕೊಟ್ಟಿರುವುದು ಗೊತ್ತಾಗಿದೆ. 15 ಕಾರುಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಚೇವೆರಾ ಕಾರು ಮತ್ತು ಭರತ್ ಬಗ್ಗೆ ಮಾಹಿತಿ ಸಿಕ್ಕಿತ್ತು.

ಯಶವಂತಪುರ ಪೊಲೀಸರು ಭರತ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಗಾಬರಿಯಾದ ಭರತ್ ಮದುವೆ ಕಾರ್ಯಕ್ರಮಕ್ಕಾಗಿ ಕಾರನ್ನು ಮಂಡ್ಯದ ತನ್ನ ಸ್ನೇಹಿತನಿಗೆ ನೀಡಿದ್ದು, ಅವನೇ ಅಪಘಾತ ಎಸಗಿರಬೇಕು ಎಂದು ಬಾಯಿಬಿಟ್ಟಿದ್ದ. ಪೊಲೀಸರು ಕೂಡಲೇ ಮಂಡ್ಯಕ್ಕೆ ದೌಡಾಯಿಸಿ ಭರತ್‍ನ ಸ್ನೇಹಿತನ ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದರು. ಭರತ್ ಮತ್ತು ಸ್ನೇಹಿತನ ವಿಚಾರಣೆ ಮಾಡಿದಾಗ ತಾನೇ ಅಪಘಾತ ಎಸಗಿದ್ದಾಗಿ ಭರತ್  ಸತ್ಯ ಒಪ್ಪಿಕೊಂಡಿದ್ದಾನೆ.

ಸದ್ಯ ಇಬ್ಬರ ಸಾವಿಗೆ ಕಾರಣನಾದ ಭರತ್ ವಿರುದ್ಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಎಸಗಿದ ಕಾರನ್ನು ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.

Post a Comment

0 Comments

Ad Code

Responsive Advertisement