Ticker

6/recent/ticker-posts

Ad Code

Responsive Advertisement

ಕರ್ನಾಟಕ ಆರ್ಯವೈಶ್ಯ ಮಂಡಳಿಯಿಂದ ಉಚಿತ ಟ್ಯಾಬ್ ವಿತರಣೆ

 ಬೆಂಗಳೂರುಫೆ 28: ರಾಜ್ಯದ ವಿವಿಧ ಸಮುದಾಯಗಳು ಮಿಸಲಾತಿಗಾಗಿ ನಡೆಸುತ್ತಿರುವ ಹೋರಾಟ ಶಾಂತಿಯುತ ಮಾರ್ಗದಲ್ಲಿ ತಾತ್ವಿಕ ಅಂತ್ಯ ಕಾಣಬೇಕುಮೀಸಲಾತಿಗಿಂತ  ಮುಖ್ಯವಾಗಿ  ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಮೂಲಭೂತ ಸೌಕರ್ಯ ದೊರಕಿಸಿಕೊಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು  ಮಹಾತ್ಮಾ ಗಾಂಧೀಜಿ ಸೇವಾ ಟ್ರಸ್ಟ್  ಸಂಸ್ಥಾಪಕರು ಮತ್ತು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

ರಾಜ್ಯ ಆರ್ಯವೈಶ್ಯ ಮಹಾಮಂಡಳಿ ಅಧ್ಯಕ್ಷವಿಧಾನಪರಿಷತ್ತಿನ ಜೆ.ಡಿ.ಎಸ್  ಮಾಜಿ ಸದಸ್ಯ ಡಾಟಿ.ಶರವಣ ನೇತೃತ್ವದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜನಾಂಗದ 100 ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರುಮೀಸಲಾತಿಗಿಂತ ಪ್ರಸ್ತುತ ಬೇಕಾಗಿರುವುದು ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆಶೈಕ್ಷಣಿಕ ಸೌಕರ್ಯ ಕಲ್ಪಿಸುವುದು ಈಗ ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಹೇಳಿದರು.

 

ಎಲ್ಲಾ ಸಮಾಜದಲ್ಲೂ ಬಡವರು ಮತ್ತು ಶ್ರೀಮಂತರಿದ್ದಾರೆಹೀಗಾಗಿ ಎಲ್ಲಾ ಸಮಾಜದಅದರಲ್ಲೂ ಶಿಕ್ಷಣದಲ್ಲಿ ಹಿಂದುಳಿದವ ಬಡವರಿಗೆ ಶಿಕ್ಷಣ ದೊರಕಿಸಿಕೊಡುವುದು ಅತ್ಯಂತ ಮುಖ್ಯವಾಗಿದೆಶುಲ್ಕ ಪಾವತಿಸಲುಪಠ್ಯ ಪುಸ್ತಕ ಖರೀದಿಸಲು ಶಕ್ತರಲ್ಲದವರಿಗೆ ನೆರವಾಗಲು ಮುಂದಾಗಬೇಕು ಎಂದರು.  

 

ಈಗಿನ ಪರಿಸ್ಥಿತಿಯಲ್ಲಿ ಮೀಸಲಾತಿ ಕುರಿತು ಏನನ್ನೂ ಹೇಳಲಾರೆಏಕೆಂದರೆ ಇದು ಇನ್ನೂ ಹೋರಾಟಚರ್ಚೆಯ ಹಂತದಲ್ಲಿದೆಸ್ವತಃ ತಾವೂ ಕೂಡ ತಜ್ಞರುನ್ಯಾಯಮೂರ್ತಿಗಳ ಜತೆ  ಕುರಿತು ಚರ್ಚೆ ನಡೆಸುತ್ತಿದ್ದು ಬೆಳವಣಿಗೆ ಅಶಾಂತಿಗೆ ಕಾರಣವಾಗಬಾರದುಶಾಂತಿಯುತ ಅಂತ್ಯ ಕಾಣಬೇಕು ಎಂಬುದೇ ತಮ್ಮ ಆಶಯವಾಗಿದೆ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

 

ಈಗಿನ ವಿದ್ಯಾರ್ಥಿಗಳಿಗೆ ಮಹಾತ್ಮಾ ಗಾಂಧೀಜಿ ಪ್ರೇರಣೆಯಾಗಬೇಕುಗಾಂಧೀಜಿಗೆ ಎಲ್ಲಾ ರೀತಿಯ ನಕಾರಾತ್ಮಕ ಸಂಗತಿಗಳನ್ನು ಸಕಾರಾತ್ಮಕಗೊಳಿಸುವ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದ್ದರುಇಂತಹ ಗುಣಗಳನ್ನು ವಿದ್ಯಾರ್ಥಿಗಳು ಮೂಗೂಡಿಸಿಕೊಳ್ಳಬೇಕುಇದು ಇಂದಿನ ಅಗತ್ಯವಾಗಿದೆ ಎಂದರು.

 

ರಾಜ್ಯ ಆರ್ಯವೈಶ್ಯ ಮಹಾಮಂಡಳಿ ಅಧ್ಯಕ್ಷವಿಧಾನಪರಿಷತ್ತಿನ ಜೆ.ಡಿ.ಎಸ್  ಮಾಜಿ ಸದಸ್ಯ ಡಾಟಿ.ಶರವಣ ಮಾತನಾಡಿಆರ್ಯ ವೈಶ್ಯ ಮಹಾಮಂಡಳಿಯಿಂದ ಮುಂಬರುವ ದಿನಗಳಲ್ಲಿ ಶಿಕ್ಷಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆನಾಗರಿಕ ಸೇವೆಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.  

 ಆರ್ಯವೈಶ್ಯ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ಜನಾಂಗದವರೂ ಇದ್ದುನಮ್ಮ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ.  ಆದರೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮತ್ತು ಮುಂದುವರೆದ ಸಮುದಾಯಗಳಿಗೂ ಶೇ 10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುತ್ತಿದ್ದುಇದರಡಿ ಆರ್ಯವೈಶ್ಯ ಸಮುದಾಯಕ್ಕೆ ಒತ್ತು ನೀಡಬೇಕುಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಸ್ಥಾಪಕ ಅಧ್ಯಕ್ಷನಾಗಿದ್ದ ತಾವು  ಹಿಂದೆ ಎಚ್.ಡಿಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 11 ಕೋಟಿ ರೂ ಹಣ ಮೀಸಲಿಡಲಾಗಿತ್ತುಆದರೆ ಈಗ ಕೇವಲ 5 ಕೋಟಿ ನಿಗದಿ ಮಾಡಲಾಗಿದೆಇದರಲ್ಲಿ ಒಂದು ಕೋಟಿ ಆಡಳಿತಾತ್ಮಕ ವೆಚ್ಚಕ್ಕೆ ವಿನಿಯೋಗವಾಗಲಿದೆಆದ್ದರಿಂದ ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಮಂಡಿಸುತ್ತಿರುವ ಬಜೆಟ್ ನಲ್ಲಿಸಮುದಾಯದ ಅಭಿವೃದ್ಧಿಗೆ 100 ರೂ ಮೀಸಲಿಡಬೇಕು ಎಂದು ಡಾ.ಟಿ.ಸರವಣ ಆಗ್ರಹಿಸಿದರು.

 ಸಮಾರಂಭದಲ್ಲಿ ಹಾಸನ ಜಿಲ್ಲಾಧಿಕಾರಿ ಆರ್ಗಿರೀಶ್ಆರ್ಯವೈಶ್ಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾದ ದೊಡ್ಡಮನಿ ಪಾಂಡುರಂಗ ಶೆಟ್ಟಿಜಿಗೋವಿಂದರಾಜ್ಯ ಉಪಾಧ್ಯಕ್ಷ ರಾಜಾಶಶಿಧರ್ಪ್ರಧಾನ ಕಾರ್ಯದರ್ಶಿ ಗಿರೀಶ್ ಪೆಂಡಕೂರ್ಸಂಘಟನಾ ಕಾರ್ಯದರ್ಶಿ ಗಾಣದಾಳ ಲಕ್ಷ್ಮೀಪತಿಡಿ.ವಿಸತ್ಯನಾರಾಯಣಖಜಾಂಚಿ .ಆರ್ರಾಮಪ್ರಸಾದ್ಮಹಿಳಾ ಘಟಕದ ಅಧ್ಯಕ್ಷರಾದ ಗೋಕುಲ ಚಲಪತಿಯೋಜನಾ ಸಂಚಾಲಕರಾದ ಕೋಟಾ ಪ್ರಸನ್ನ ಕುಮಾರ್ಡಿ.ಡಿಪ್ರಹಲ್ಹಾದ್ ಉಪಸ್ಥಿತರಿದ್ದರು.


ADVERTISEMENT


https://www.youtube.com/watch?v=xQ2wqxpgPhA&t=26s



Post a Comment

0 Comments

Ad Code

Responsive Advertisement