2013 ನೇ ಆಕ್ಟ್ ಪ್ರಕಾರವಾಗಿ ಸುಪ್ರೀಂ ಕೋರ್ಟ್ , ರಾಷ್ಟ್ರಪತಿ , ಪ್ರಧಾನ ಮಂತ್ರಿ , ಉಚ್ಚ ನ್ಯಾಯಾಲಯದವರು ಬೆಂಗಳೂರು ನಗರದಲ್ಲಿನ ಮ್ಯಾನುವೆಲ್ ಸ್ಕ್ಯಾವಂಜರ್ಗಳಿಗೆ 201 ಜನ , 2018-19 ರಲ್ಲಿ 1424 ಜನಗಳಿಗೆ ರೂ . 40.000 ಅನುದಾನ ಮತ್ತು ಐ.ಡಿ.ಕಾರ್ಡ್ ನೀಡಬೇಕೆಂದು ಹಾಗ ಇವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಬೇಕೆಂದು ಬಿ.ಬಿ.ಎಂ.ಪಿ. ಆದೇಶ ಮಾಡಿರುತ್ತಾರೆ. ಆದರೆ ಸರ್ಕಾರದ ವೈಫಲ್ಯದಿಂದ ಬಿ.ಬಿ.ಎಂ.ಪಿ. ವೈಫಲ್ಯದಿಂದ ಬೆಂಗಳೂರಿನಲ್ಲಿ ಮ್ಯಾನುವೆಲ್ ಸ್ಕಾಂದಜರ್ಗಳಿಗೆ ತುಂಬಾ ಅನ್ಯಾಯ ನಡೆಯುತ್ತಿದೆ . ಬಿಬಿಎಂಪಿ ಧೋರಣೆ ವಿರುದ್ಧ ನಾಳೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸೌಲಭ್ಯ ವಂಚಿತ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಗಳಿಗೆ ಅನುದಾನ, ಗುರುತಿನ ಚೀಟಿ ಮತ್ತಿತರ ಸೌಲಭ್ಯ ಕಲ್ಲಿಸುವ ಬೇಡಿಕೆ ಈಡೇರಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಸೌಲಭ್ಯ ಫಲಾನುಭವಿಗಳ ಪಟ್ಟಿ ಕಳುಹಿಸಹದೇ ಬಿಬಿಎಂಪಿ ಅನ್ಯಾಯ ಮಾಡುತ್ತಿದೆ ಈ ಧೋರಣೆ ಖಂಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ನಗರ ಅಧ್ಯಕ್ಷ ಜಿ.ಎನ್. ನಾಗೇಂದ್ರ ಹೇಳಿದ್ದಾರೆ.
VARTHAJALA, BANGALORE.
0 Comments